ವಿಜಯಪುರ : ವಿದ್ಯಾರ್ಥಿನಿಯರು ಮಾತ್ರವಲ್ಲದೇ ವಿಜಯಪುರ ನಗರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕಿಯರು ಬುರ್ಖಾ, ಹಿಜಾಬ್ ಧರಿಸಿಯೇ ಮಂಗಳವಾರ ಶಾಲೆಗೆ ಆಗಮಿಸಿದ್ದಾರೆ.
ಮೊದಲಿನಂತೆ, ಬುರ್ಖಾ, ಹಿಜಾಬ್ ಧರಿಸಿಯೇ ಪ್ರಾರ್ಥನೆಯಲ್ಲಿ ಶಿಕ್ಷಕಿಯರು, ವಿದ್ಯಾರ್ಥಿನಿಯರು ಭಾಗಿಯಾಗಿದ್ದರು. ಅಲ್ಲದೇ ಕೆಲ ವಿದ್ಯಾರ್ಥಿಗಳು ನಮಾಜ್ ಮಾಡುವಾಗ ಧರಿಸುವ ಟೋಪಿ ಧರಿಸಿ ಬಂದಿದ್ದರು.
ಆರಂಭದ ಪ್ರಾರ್ಥನೆ ಮುಗಿದ ನಂತರ ಬುರ್ಖಾ, ಹಿಜಾಬ್ ಧರಿಸಿಯೇ ಶಿಕ್ಷಕಿಯರು ವಿದ್ಯಾರ್ಥಿನಿಯರು ತರಗತಿಗೆ ತೆರಳಿದರು. “ಹಿಜಾಬ್ ಧರಿಸಿ ಬರಬಾರದು ಅಂತ ಆರ್ಡರ್ ಬಂದಿಲ್ಲ, ನಮಗೆ ಯಾರೂ ಆರ್ಡರ್ ಕೊಟ್ಟಿಲ್ಲ,” ಎಂದು ಶಾಲೆಯ ಶಿಕ್ಷಕರೊಬ್ಬರ ಹೇಳಿದರು.
ವಿಷಯ ತಿಳಿದು ಶಾಲೆಗೆ ಆಗಮಿಸಿದ್ದ ವಿಜಯಪುರ ನಗರ ಬಿಇಓ ಎಂ.ಬಿ.ಮೊರಟಗಿ ತರಗತಿಗಳ ಭೇಟಿ ನೀಡಿ “ಇಲ್ಲಿನ ಪರಸ್ಥಿತಿ ವೀಕ್ಷಣೆ ಮಾಡಿದ್ದೇನೆ. ಡಿಡಿಪಿಐ ಅವರಿಗೆ ವರದಿ ನೀಡುತ್ತೇನೆ,” ಎಂದರು.