ಬೆಳಗಾವಿ : ಸಹ್ಯಾದ್ರಿ ನಗರದ ಕ್ರಿಷಾ ಕೇಶ್ವಾನಿ ಮತ್ತು ಅವರ ಇಬ್ಬರು ಮಕ್ಕಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ್ ಕೇಶ್ವಾನಿ ಎಂಬವರನ್ನು ಬಂಧಿಸಲಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ, ಬೋರಲಿಂಗಯ್ಯ, ಹಿಂಡಲಗಾ ರಸ್ತೆಯಲ್ಲಿರುವ ಗಣಪತಿ ಮಂದಿರದ ಬಳಿಯಿರುವ ನಾಲ್ಕು ನೀರಿನ ಹೊಂಡಗಳಲ್ಲಿ ಕೊನೆಯ ಹೊಂಡದಲ್ಲಿ
ಕ್ರಿಷಾ ತಮ್ಮಿಂಬರು ಮಕ್ಕಳೊಂದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಕ್ರಿಷಾ ತವರು ಮನೆಯವರು ನೀಡಿದ ದೂರಿನಂತೆ ಮನೀಶ್ ಕೇಶವಾನಿ ಎಂಬವರನ್ನು ಬಂಧಿಸಲಾಗಿದೆ. ದೂರಿನಲ್ಲಿ ನಮೂದಿಸಿರುವ ಊಳಿದವರನ್ನೂ ಬಂಧಿಸಲಾಗುವುದು ಎಂದರು.
ಇನ್ನು ಈ ಪ್ರಕರಣ ಸಂಬಂಧ ತನಿಖೆ ನಡೆಸುವಲ್ಲಿ ವಿಳಂಬವಾದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕೆರೆಯಲ್ಲಿ ಮೃತ ಶರೀರ ಸಿಗಲು ವಿಳಂಬವಾಯಿತು. ಇನ್ನು ಮಹಿಳೆಯ ಮೃತ ಕ್ರಿಷಾ ಕುಟುಂಬಸ್ಥರು ನೀಡ್ಡಿದ್ದ ದೂರಿನಲ್ಲಿ ‘ ಹಲವು ದೂರುಗಳಿದ್ದು’ ಅವುಗಳನ್ನು ಸರಿಪಡಿಕೊಳ್ಳಲು ವಿಳಂಬವಾಗಿದೆ ಎಂದರು.