No menu items!
Tuesday, December 3, 2024

“ಒಂದೇ ತಿಂಗಳಲ್ಲಿ ಆಗಲಿದೆ ಬದಲಾವಣೆ,” ಪಂಜಾಬ್ ನಿಯೋಜಿತ ಸಿಎಂ ಮಾನ್

Must read

  • ದೆಹಲಿಯಂತೆ ಶಾಲೆ, ಆರೋಗ್ಯ ಕ್ಷೇತ್ರಕ್ಕೆ ಆಧ್ಯತೆ

ಧುರಿ (ಪಂಜಾಬ್): ಸ್ವಾತಂತ್ರ್ಯ ಹೋರಾಟಗಾರ ಶಹೀದ್‌ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ನವಾನ್‌ಶಹರ್ ಜಿಲ್ಲೆಯ ಖಟ್ಕರ್‌ಕಲನ್‌ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಹಮ್ಮಿಕೊಳ್ಳುವುದಾಗಿ ಪಂಜಾಬ್ ಮುಖ್ಯಮಂತ್ರಿ ನಿಯೋಜಿತ ಭಗವಂತ್ ಮಾನ್ ಪ್ರೇಕ್ಷಕರ ಹರ್ಷೋದ್ಗಾರ ಮಧ್ಯೆ ಗುರುವಾರ ಘೋಷಣೆ ಮಾಡಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ವಾಡಿಕೆಯಂತೆ ಮುಖ್ಯಮಂತ್ರಿಗಳ ಫೋಟೋ ಇರುವುದಿಲ್ಲ ಎಂದು ಅವರು ಪ್ರಕಟಿಸಿದ್ದಾರೆ.

ಪ್ರಮಾಣ ಸ್ವೀಕಾರ ಸಮಾರಂಭವು ರಾಜಭವನದಲ್ಲಿ ನಡೆಯುವುದಿಲ್ಲ, ಅದು ಖಟ್ಕರ್‌ಕಲನ್‌ನಲ್ಲಿ ನಡೆಯಲಿದೆ. ದಿನಾಂಕವನ್ನು ನಂತರ ಪ್ರಕಟಿಸಲಾಗುವುದು” ಎಂದು ಅವರು ಧುರಿಯಲ್ಲಿ ತಮ್ಮ ವಿಜಯ ಭಾಷಣದಲ್ಲಿ ಹೇಳಿದರು, ಅಲ್ಲಿ ಭಗವಂತ್‌ ಸಿಂಗ್‌ ಮಾನ್‌ ಅವರು 58,000 ಕ್ಕೂ ಹೆಚ್ಚು ಮತಗಳಿಂದ ಗೆದ್ದರು.

ಆಮ್ ಆದ್ಮಿ ಪಕ್ಷದ ಗೆಲುವಿನ ಪ್ರಮಾಣದ ಬಗ್ಗೆ ಮಾತನಾಡುವಾಗಸೋತಿರುವ ಭಾರೀ ನಾಯಕರನ್ನು ಹೆಸರಿಸುವ ಮೂಲಕ, “ಬಡೆ (ಪ್ರಕಾಶ್ ಸಿಂಗ್) ಬಾದಲ್ ಸಾಹಿಬ್ ಸೋತಿದ್ದಾರೆ, ಸುಖಬೀರ್ (ಬಾದಲ್) ಜಲಾಲಾಬಾದ್‌ನಿಂದ ಸೋತಿದ್ದಾರೆ, ಕ್ಯಾಪ್ಟನ್ ಅಮರಿಂದರ್‌ ಸಿಂಗ್‌ ಪಟಿಯಾಲದಿಂದ ಸೋತಿದ್ದಾರೆ, ಸಿಧು ಮತ್ತು ಮಜಿಥಿಯಾ ಕೂಡ ಸೋತ್ತಿದ್ದಾರೆ, (ಚರಂಜಿತ್ ಸಿಂಗ್) ಚನ್ನಿ ಎರಡೂ ಸ್ಥಾನಗಳಲ್ಲಿ ಸೋತಿದ್ದಾರೆ ಎಂದು ಹೇಳಿದರು.

ಶಾಲೆಗಳು, ಆರೋಗ್ಯ, ಉದ್ಯಮ, ಕೃಷಿಯನ್ನು ಲಾಭದಾಯಕವಾಗಿಸುವುದು, ಮಹಿಳೆಯರ ಸುರಕ್ಷತೆ ಮತ್ತು ಕ್ರೀಡಾ ಮೂಲಸೌಕರ್ಯಗಳನ್ನು ಸುಧಾರಿಸುವುದು ಅಧಿಕಾರ ವಹಿಸಿಕೊಂಡ ನಂತರ ತನ್ನ ಮೊದಲ ಆದ್ಯತೆಯಾಗಿದೆ ಎಂದು ಮಾನ್ ಹೇಳಿದರು.

ಒಂದು ತಿಂಗಳೊಳಗೆ ಪಂಜಾಬ್‌ನಲ್ಲಿ ಬದಲಾವಣೆಯನ್ನು ನೀವು ಕಾಣಲು ಪ್ರಾರಂಭಿಸುತ್ತೀರಿ ಎಂದು ಭರವಸೆ ನೀಡಿದ ಅವರು, ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಜನರಲ್ಲಿ ಮನವಿ ಮಾಡಿದ ಅವರು, ಎಎಪಿಗೆ ಮತ ಹಾಕದವರು ಆತಂಕಪಡುವ ಅಗತ್ಯವಿಲ್ಲ, ಏಕೆಂದರೆ ಸರ್ಕಾರವು ಸಮಾಜದ ಎಲ್ಲಾ ವರ್ಗದವರಿಗಾಗಿ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.

ಗುರುವಾರದ ಮೊದಲ ಆರು ಗಂಟೆಗಳ ಮತ ಎಣಿಕೆಯ ನಂತರ ಆಮ್ ಆದ್ಮಿ ಪಕ್ಷವು ಪಂಜಾಬ್‌ನಲ್ಲಿ 117 ವಿಧಾನಸಭಾ ಸ್ಥಾನಗಳ ಪೈಕಿ 91 ರಲ್ಲಿ ಮುನ್ನಡೆ ಸಾಧಿಸಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!