ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ರೌಡಿಶೀಟರ್ ಅಕ್ಬರ್ ಮುಲ್ಲಾ ಕೊಲೆ ಪ್ರಕರಣ ಮಾಸುವ ಮುನ್ನವೇ ಮಹಿಳೆಯೊಬ್ಬರ ಶವ ಪಟ್ಟೆಯಾಗಿದೆ.
ಹುಬ್ಬಳ್ಳಿಯ ಕೃಷ್ಣ ಭವನದ ಎದುರಿನಲ್ಲಿ ಅಪರಿಚಿತ ಮಹಿಳೆಯೊಬ್ಬಳು ಕೊಲೆಯಾದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಬೆಳಿಗ್ಗೆ ರಕ್ತ ನೋಡಿದ ಜನರುಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಡಿಸಿಪಿ ಸಾಹಿಲ್ ಬಾಗ್ಲಾ ಮಾಧ್ಯಮಗಳಿಗೆ ಮಾಹಿತಿ ನೀಡಿ : ಇಂದು ಮುಂಜಾನೆ ಅಪರಿಚಿತ ಮಹಿಳೆಯೊಬ್ಬರ ಶವ ಪಟ್ಟೆಯಾಗಿದ್ದು, ಶವದ ಮೇಲೆ ರಕ್ತವಿರುವದರಿಂದ ಅವರು ಕೊಲೆಯಾಗಿದ್ದಾರೆ. ಮಹಿಳೆಯ ಕುರಿತು ಯಾವುದೇ ಮಾಹಿತಿ ಗೊತ್ತಾಗಿಲ್ಲ. ಸಿಸಿಟಿವಿ ಕ್ಯಾಮರಾ ದೃಶ್ಯ ಗಳಿಂದ ಅಪರಾಧಿಗಳನ್ನು ಶೀಘ್ರವೇ ಬಂಧಿಸಲಾಗುವದೆಂದು ತಿಳಿಸಿದರು.
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ಮಾರಕಾಸ್ತ್ರದಿಂದ ಕೊಲೆಗಳು ನಡೆಯುತ್ತಲೇಇದೆ. ಮಹಿಳೆಯೊಬ್ಬರನ್ನು ನಡುರಸ್ತೆಯಲ್ಲಿ ಕೊಲೆ ಮಾಡಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.