ಬೆಂಗಳೂರು : ಕನ್ನಡಿಗರ ಪ್ರೀತಿಯ ‘ಅಪ್ಪು’, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ ‘ಜೇಮ್ಸ್’ ತೆರೆ ಕಂಡು ಇನ್ನೂ ಒಂದು ವಾರವಾಗಿಲ್ಲ, ಆದರೆ ‘ಕಾಣದ ಕೈಗಳು’ ಜೇಮ್ಸ್ ಸಿನಿಮಾ ಪ್ರದರ್ಶನವನ್ನು ಕಡಿತಗೊಳಿಸಿ, ‘ಕಾಶ್ಮೀರ್ ಫೈಲ್ಸ್’ ತೋರಿಸಲು ಒತ್ತಡ ಹೇರುತ್ತಿರುವ ಸಂಗತಿ ಬಯಲಾಗಿದೆ.
‘ಜೇಮ್ಸ್’ ಸಿನಿಮಾ ನಿರ್ಮಾಪಕ ಹಾಗೂ ಹಂಚಿಕೆದಾರರೂ ಆಗಿರುವ ಕಿಶೋರ್ ಪತ್ತಿಕೊಂಡ ಅವರ ಮೇಲೆ ಒತ್ತಡ ತಂದು ಜೇಮ್ಸ್ ಸಿನಿಮಾ ಷೋಗಳನ್ನು ಕಡಿತಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ. ಇದೇ ವೇಳೆ ಕಿಶೋರ್ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದಕ್ಕೂ ಸಂಬಂಧ ಕಲ್ಪಿಸಿ ಮಾಧ್ಯಮಗಳು ವರದಿ ಮಾಡುತ್ತಿವೆ.
ಬಹಳಷ್ಟು ಕಡೆ ಮಾರ್ನಿಂಗ್ ಷೋ, ಸೆಕೆಂಡ್ ಷೋ ತೆಗೆದು ಬೇರೆ ಸಿನಿಮಾ ಹಾಕಲು ಹೋದರು. ನಾನು ಅದನ್ನು ವಿರೋಧಿಸಿದೆ. ನಮ್ಮ ಸಿನಿಮಾ ಚೆನ್ನಾಗಿದೆ. ಪುನೀತ್ ಅವರ ಕೊನೆಯ ಸಿನಿಮಾವನ್ನು ಕನ್ನಡಿಗರು ನೋಡುತ್ತಿದ್ದಾರೆ ಎಂದೆ. ಅದಕ್ಕೆ ಚಿತ್ರಮಂದಿರದವರು- ‘ಇಲ್ಲ ಸರ್, ಅವರು ಹೇಳ್ತಾರೆ, ಇವರು ಹೇಳ್ತಾರೆ, ತೆರಿಗೆ ವಿನಾಯಿತಿ ನೀಡಿದ್ದೇವೆ ಹಾಕಿ ಅನ್ನುತ್ತಿದ್ದಾರೆ- ಅಂದರು. ನಾನು ಒಪ್ಪಲಿಲ್ಲ. ನಮ್ಮ ಸಿನಿಮಾದ ನಾಲ್ಕು ಷೋ ಆದ ಮೇಲೆ ಬೇರೆ ಸಿನಿಮಾ ಹಾಕಿಕೊಳ್ಳಲಿ. ಆದರೆ ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ತೊಂದರೆ ಕೊಡಬೇಡಿ ಎಂದು ತಿಳಿಸಿದೆ. ಕಾಶ್ಮೀರ್ ಫೈಲ್ ಅನ್ನು ಬೆಳಿಗ್ಗೆ ಏಳು ಗಂಟೆಗೆ ಪ್ರದರ್ಶನ ಮಾಡಿಕೊಳ್ಳಲಿ. ಆದರೆ ಆದರೆ ಹತ್ತು ಗಂಟೆಯ ಷೋಗೆ ತೊಂದರೆ ಕೊಡಬೇಡಿ ಎಂದಿದ್ದೇನೆ” ಎಂದರು.
ಪೂರ್ಣ ಪ್ರಮಾಣದಲ್ಲಿ ಅಲ್ಲವಾದರೂ ಒಂದೊಂದು ಪ್ರದರ್ಶನವನ್ನು ಕಡಿತಗೊಳಿಸಲು ಯತ್ನಿಸಿದರು. ಇನ್ನೂ ಒಂದು ವಾರ ಕಳೆದಿಲ್ಲ. ಆಗಲೇ ಸಿನಿಮಾ ತೆಗೆಯುವುದು ಸರಿಯಲ್ಲ ಎಂದೆ. ವಾರ ಕಳೆದ ಮೇಲೆ ಒಂದು ಊರಲ್ಲಿ ಎರಡು ಚಿತ್ರಮಂದಿರದಲ್ಲಿ ಜೇಮ್ಸ್ ಇದ್ದರೆ, ಒಂದು ಚಿತ್ರಮಂದಿರವನ್ನು ಬಿಟ್ಟುಕೊಡಲಾಗುವುದು. ಆದರೆ ಅಭಿಮಾನಿಗಳು ನೋಡುತ್ತಿರುವಾಗ ತೆರವು ಸರಿಯಲ್ಲ ಎಂಬುದಷ್ಟೇ ನಮ್ಮ ಆಕ್ಷೇಪ” ಎಂದು ಸ್ಪಷ್ಟಪಡಿಸಿದರು.
‘ಜೇಮ್ಸ್’ಗೆ ಸಿನಿಮಾ ಷೋ ಕಡಿತಗೊಳಿಸಿ, ಕಾಶ್ಮೀರ್ ಫೈಲ್ಸ್‌ಗೆ ತೋರಿಸುವಂತೆ ಬಿಜೆಪಿ ಶಾಸಕರು ಒತ್ತಡ ಹೇರುತ್ತಿರುವುದು ನಿಜ. ಒಂದು ಷೋಗೆ ಅವಕಾಶ ಕೋರಿದ್ದು ಚಿತ್ರಮಂದಿರದವರು. ಅವರಿಗೆ ಯಾರು ಒತ್ತಡ ಹಾಕುತ್ತಿದ್ದಾರೋ ಗೊತ್ತಿಲ್ಲ. ಶಾಸಕರು ಹೇಳಿದ್ದಾರೋ, ಮತ್ತ್ಯಾರೋ ಹೇಳುತ್ತಿದ್ದಾರೋ ಗೊತ್ತಿಲ್ಲ. ಅವರು ಸಿನಿಮಾ ಫ್ರೀ ತೋರಿಸ್ತಾರಂತೆ, ಅನೌನ್ಸ್ ಮಾಡಿದ್ದಾರಂತೆ ಎಂದು ಚಿತ್ರಮಂದಿರದವರು ನನ್ನ ಬಳಿ ಹೇಳಿದರು. ಫ್ರೀ ತೋರಿಸೋ ಸಿನಿಮಾವನ್ನು ಬೆಳಿಗ್ಗೆ ಹಾಕಿದರೇನೂ ರಾತ್ರಿ ಹಾಕಿದರೇನು? ನನ್ನ ಷೋಗೆ ತೊಂದರೆ ಕೊಡಬೇಡಿ ಎಂದು ತಿಳಿಸಿರುವೆ” ಎಂದು ಹೇಳಿದರು.
“ಅದು ಒಂದೂವರೆ ತಾಸು ಇರುವ ಸಿನಿಮಾ. ಬೆಳಿಗ್ಗೆ ಎಂಟು ಗಂಟೆಗೆ ಹಾಕಿಕೊಳ್ಳಲಿ. ಹತ್ತೂವರೆಗೆ ಜೇಮ್ಸ್ ಪ್ರದರ್ಶನವಾಗಲಿ. ಹಾಗೆಯೇ ‘ಆರ್‌ಆರ್‌ಆರ್’ ಬಂತು ಎಂದು ನಮ್ಮ ಸಿನಿಮಾ ತೆಗೆಯಬೇಡಿ ಎಂದೂ ಕೋರಿದ್ದೇನೆ. ಮಂಡ್ಯದಲ್ಲಿ ಐದು ಥೇಟರ್ ಇವೆ. ಹಾಗೆಂದು ಎಲ್ಲ ಥೇಟರ್‌ನಲ್ಲೂ ನಾವು ಸಿನಿಮಾ ಹಾಕಲ್ಲ. ಎರಡು ಉಳಿಸಿಕೊಳ್ಳುತ್ತೇವೆ ಅಷ್ಟೇ ಎಂದಿರುವೆ. ಕೆಲವರು ಸಹಕರಿಸುತ್ತಿದ್ದಾರೆ. ಮತ್ತೆ ಕೆಲವರು ಸಂಜೆ ವೇಳೆಗೆ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ” ಎಂದು ಮಾಹಿತಿ ನೀಡಿದರು.