No menu items!
Tuesday, October 22, 2024

ಬೆಳಗಾವಿ ಬಜೆಟ್ : ₹ 6.31 ಲಕ್ಷ ಉಳಿತಾಯ ನಿರೀಕ್ಷೆ

Must read

ಬೆಳಗಾವಿ : ಬೆಳಗಾವಿ ಮಹನಗರ ಪಾಲಿಕೆಯ 2022-23ನೇ ಸಾಲಿನ ಬಜೆಟ್‍ನ್ನು ಜಿಲ್ಲಾಧಿಕಾರಿಗಳಾದ ಎಂ.ಜಿ ಹಿರೇಮಠ ಮಂಡಿಸಿದರು. 2022-23ನೇ ಸಾಲಿನಲ್ಲಿ 44,765.22 ಲಕ್ಷಗಳಷ್ಟು ಅಂದಾಜು ಆದಾಯವನ್ನು ನಿರೀಕ್ಷಿಸಲಾಗಿದ್ದು, 44,758.91 ಲಕ್ಷಗಳಷ್ಟು ಅಂದಾಜು ವೆಚ್ಚವನ್ನು ನಿರೀಕ್ಷೆ ಮಾಡಲಾಗಿದೆ. ಒಟ್ಟಿನಲ್ಲಿ 6.31 ಲಕ್ಷ ರೂಪಾಯಿಯ ಉಳಿತಾಯ ನಿರೀಕ್ಷೆ ಮಾಡಲಾಗಿದೆ.

ಬೆಳಗಾವಿಯಲ್ಲಿ ಪಾಲಿಕೆ ಬಜೆಟ್‍ನ್ನು ಮಂಡಿಸಿದ ನಂತರ ಮಾಧ್ಯಮಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡ ಜಿಲ್ಲಾಧಿಕಾರಿಗಳು, ಬೀದಿ ದೀಪಗಳ ನಿರ್ವಹಣೆಗೆ 550ಲಕ್ಷ ರೂಪಾಯಿಗಳನ್ನು ವ್ಯಯ ಮಾಡಲು ನಿರ್ಧರಿಸಲಾಗಿದೆ. ಸ್ಮಾರ್ಟ್ ಸಿಟಿ ಸಹಯೋಗದೊಂದಿಗೆ ಎಲ್‍ಇಡಿ ಲೈಟ್ ಹಾಕಲು ಯೋಜಿಸದಲಾಗಿದೆ. ರಸ್ತೆ, ಒಳಚರಂಡಿ, ಮಾರ್ಗಸೂಚಿಗಳನ್ನು ಅಳವಡಿಸಲು 550ಲಕ್ಷ ರೂಪಾಯಿ, ತುರ್ತು ಸಂದರ್ಭಗಳಲ್ಲಿ ವಿವಿಧ ಮೂಲಭೂತ ಸೌಕರ್ಯಗಳ ಇಡೇರಿಕೆಗಾಗಿ 550 ಲಕ್ಷ ರೂಪಾಯಿಗಳನ್ನು ನಿಗದಿಪಡಿಸಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕಲ್ಯಾಣಾಭಿವೃದ್ಧಿಗಾಗಿ 509 ಲಕ್ಷಗಳನ್ನು ನಿಗದಿಗೊಳಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಅಭಿವೃದ್ಧಿಗೆ 116.81 ಲಕ್ಷ ರೂಪಾಯಿಗಳನ್ನು ಮೀಸಲಿರಿಸಿದೆ. ಇನ್ನುಳಿದಂತೆ ಉದ್ಯಮಬಾಗ್ ಕೂಗಾರಿಕಾ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ 200ಲಕ್ಷ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.
ಬೆಳಗಾವಿ ನಗರದಲ್ಲಿ ಪ್ರಮುಖ ವೃತ್ತಗಳಲ್ಲಿ ಪ್ರತಿಮೆ ಸ್ಥಾಪನೆಗೆ 100ಲಕ್ಷ ರೂಪಾಯಿಗಳನ್ನು, ಬೀದಿ ನಾಯಿಗಳ ನಿರ್ವಹಣೆಗಾಗಿ 60ಲಕ್ಷ ರೂ, ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು 50ಲಕ್ಷ ರೂ, ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 30ಲಕ್ಷ ರೂ, ವಿವಿಧ ಸ್ಮಶಾನ ಕೇಂದ್ರಗಳ ಅಭಿವೃದ್ಧಿ ಹಾಗೂ ಪರಿಸರ ಸ್ನೇಹೀ ದಹನ ಕ್ರಿಯೆ ನಡೆಸಲು 50ಲಕ್ಷ ರೂಪಾಯಿಗಳು ಸೇರಿದಂತೆ, ಸಾಂಕ್ರಾಮಿಕ ರೋಗಗಳ ತಡೆ ಹಾಗೂ ಪಾಲಿಕೆ ಆದಾಯದ ಶೇ 1ರಷ್ಟನ್ನು ಕ್ರೀಡೆಗಾಗಿ ಮೀಸಲಿರಿಸುವುದು ಸೇರಿ ಇನ್ನೂ ಅನೇಕ ಯೋಜನೆಗಳನ್ನು ರೂಪಿಸಲು ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದರು.

ಮಹಾನಗರ ಪಾಲಿಕೆಯ ಒಡೆತನದ ಕ್ರೀಡಾ ಚಟುವಟಿಕೆಗಳಿಗಾಗಿ ನಿಮರ್ಿಸಲಾದ ಈಜುಕೊಳ, ಬ್ಯಾಡ್ಮಿಂಟನ್ ಹಾಲ್ ಹಾಗೂ ಹೈಟೆಕ್ ಜಿಮ್ ನಿರ್ವಹಣೆಗಾಗಿ ರೂ.50.00 ಲಕ್ಷಗಳನ್ನು ಮೀಸಲಿಡಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದೇಸಲ ಉಪಯೋಗಿಸುವಂತಹ ಪ್ಲಾಸ್ಟಿಕ ಮುಕ್ತ ನಗರವನ್ನಾಗಿಸಲು ಸ್ವಸಹಾಯ ಸಂಘಗಳ ಮೂಲಕ ಪರ್ಯಯ ವಸ್ತುಗಳಾದ ಪೇಪರ ಬ್ಯಾಗ್, ಬಟ್ಟೆ ಬ್ಯಾಗ್ಗಳು ಹಾಗೂ ಇತರೆ ಬ್ಯಾಗಗಳ ತಯಾರಿಕೆಗೆ ರೂ.10.00 ಲಕ್ಷಗಳನ್ನು ಮೀಸಲಿರಿಸಿದೆ.
ಮಹಾನಗರ ಪಾಲಿಕೆ0ು ನಾಲ್ಕು ಉಪ ವಿಭಾಗ ಕೇಂದ್ರಗಳನ್ನು ಬಲಪಡಿಸಲು ಉದ್ದೇಶಿಸಿದ್ದು ಹಾಗೂ ಆಡಳಿತ ವಿಕೇಂದ್ರಿಕರಣಗೊಳಿಸಿ, ಸಾರ್ವಜನಿಕ ಸೇವೆಗಳಾದ ಪಹಣಿ ವಿತರಣೆ, ಆಸ್ತಿ ತೆರಿಗೆ ಪಾವತಿಸುವ ವ್ಯವಸ್ಥೆ, ಜನನ-ಮರಣ ಪ್ರಮಾಣ ಪತ್ರ ವಿತರಣೆ, ಖಾತೆ ಬದಲಾವಣೆ (ಇ-ಆಸ್ತಿ), ಉದ್ಯಮೆ ಪರವಾನಿಗೆ ಹಾಗೂ ನವೀಕರಣ, ಇತ್ಯಾದಿ ಮೂಲಭೂತ ಸೇವೆಗಳನ್ನು ಒದಗಿಸಲು ರೂ.20.00 ಲಕ್ಷಗಳನ್ನು ಮೀಸಲಿರಿಸಲಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಆಸ್ತಿ ತೆರಿಗೆ, ನೀರಿನ ಕರ ಬಾಕಿ ಇರುವ ಕುರಿತು ತಂತ್ರಜ್ಞಾನವನ್ನು ಬಳಸಿ ಎಸ್.ಎಂ.ಎಸ್. ಮೂಲಕ ತೆರಿಗೆ ವಿವರದ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು. ಬೆಳಗಾವಿ ಮಹಾನಗರ ಪಾಲಿಕೆ0ು ವ್ಯಾಪ್ತಿ0ುಲ್ಲಿ ಬರುವ ಎಲ್ಲ 58 ವಾಡರ್ುಗಳ ಸರ್ವತೋಮುಖ ಅಭಿವೃದ್ಧಿ ಸೃಜಿಸಿ ಕಾಪಾಡುವದು ಹಾಗೂ ಸಮಸ್ತ ನಾಗರೀಕರಿಗೆ ಉತ್ಕೃಷ್ಟವಾದ ಸೇವೆ ಒದಗಿಸಲು ಮಹಾನಗರ ಪಾಲಿಕೆ ಸದಾ ಶ್ರಮಿಸುತ್ತಿದೆ. ಆಯವ್ಯಯದಲ್ಲಿ ಅಳವಡಿಸಿದ ಎಲ್ಲ ಕಾರ್ಯಕ್ರಮಗಳು ನಿಗಧಿತ ವೇಳೆಯಲ್ಲಿ ಅನುಷ್ಠಾನಗೊಳಿಸಲಾಗುವುದೆಂಬ ಆಶಾಭಾವನೆ ಹೊಂದಿದ್ದು, 2022-23 ನೇ ಸಾಲಿನಲ್ಲಿ ಬೆಳಗಾವಿ ನಗರದ ಸಮಗ್ರ ಮೂಲಭೂತ ಸೌಕ0ರ್ುಗಳನ್ನು ಹಾಗೂ ನಾಗರೀಕರ ನಿರೀಕ್ಷೆಯನ್ನು ತಲುಪಲು ಮತ್ತು ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!