ಬೆಳಗಾವಿ : ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದ್ದು ಬುಧುವಾರ ಕೂಡ ಸೊಂಕೀತರ ಸಂಖ್ಯೆ ಒಂದು ಸಾವಿರ ದಾಟಿದೆ. ಸಮಾಧಾನಕರ ವಿಷಯವೆಂದರೆ ಸೊಂಕಿನಿಂದ ಗುಣವಾದವರ ಸಂಖ್ಯೆಯೂ ಹೆಚ್ಚು ಕಡಿಮೆ ಅಷ್ಟೇಯಿದೆ.
ಇಂದು ಹೊಸದಾಗಿ 1060 ಪಾಸಿಟಿವ್ ಕೇಸ್ಗಳು ದೃಢಪಟ್ಟಿವೆ. ಓರ್ವ ಸೊಂಕಿತ ಸಾವನ್ನಪ್ಪಿದ್ದಾರೆ.
ಬುಧವಾರ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್ನನಲ್ಲಿ ಜಿಲ್ಲೆಯಲ್ಲಿ 1060 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹಾಗೆಯೇ 1056 ಸೊಂಕಿತರು ಗುಣವಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿರುತ್ತಾರೆ.
ಜಿಲ್ಲೆಯಲ್ಲಿ 6749 ಆಕ್ಟಿವ್ ಕೇಸ್ಗಳಿದ್ದು ಒಟ್ಟು 977 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.