No menu items!
Friday, November 22, 2024

ಕೊರೋನಾ ಸೊಂಕಿನಲ್ಲಿ ಇಳಿಕೆ, ಹೊಸ ಸೊಂಕಿತರಿಗಿಂತ
ಗುಣವಾದವರೇ ಹೆಚ್ಚು

Must read

ಬೆಂಗಳೂರು: ಕರ್ನಾಟಕದಲ್ಲಿ ದೈನಂದಿನ ಕೊರೊನಾ ಸೋಂಕು ಮತ್ತಷ್ಟು ಕಡಿಮೆಯಾಗಿದೆ. ಇಂದು, ಸೋಮವಾರ ಹೊಸದಾಗಿ 6151 ಜನರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಅಲ್ಲದೇ ಸೋಂಕಿನಿಂದ ಬಳಲುತ್ತಿದ್ದ 49 ಜನರು ಮೃತಪಟ್ಟಿದ್ದಾರೆ ಹಾಗೂ 16,802 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ 87,080 ಸಕ್ರಿಯ ಪ್ರಕರಣಗಳಿವೆ. ಸಕಾರಾತ್ಮಕ ದರ ಶೇ 6.19, ಸೋಂಕಿತರ ಸಾವಿನ ಸರಾಸರಿ ಶೇ 0.79 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 39,02,309 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 37,75,799 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 39,396 ಜನರು ಮೃತಪಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿ ಇಂದು 2718 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 6726 ಜನರು ಚೇತರಿಸಿಕೊಂಡಿದ್ದಾರೆ. ಒಟ್ಟು 15 ಜನರು ಮೃತಪಟ್ಟಿದ್ದಾರೆ. ನಗರದಲ್ಲಿ 35,631 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಸೊಂಕಿನ ಮಾಹಿತಿ…

 ನಗರ 2718, ಬಾಗಲಕೋಟೆ 60, ಬಳ್ಳಾರಿ 154, ಬೆಳಗಾವಿ 321, ಬೆಂಗಳೂರು ಗ್ರಾಮಾಂತರ 70, ಬೀದರ್ 34, ಚಾಮರಾಜನಗರ 115, ಚಿಕ್ಕಬಳ್ಳಾಪುರ 102, ಚಿಕ್ಕಮಗಳೂರು 51, ಚಿತ್ರದುರ್ಗ 161, ದಕ್ಷಿಣ ಕನ್ನಡ 90, ದಾವಣಗೆರೆ 35, ಧಾರವಾಡ 149, ಗದಗ 31, ಹಾಸನ 219, ಹಾವೇರಿ 102, ಕಲಬುರ್ಗಿ 117, ಕೊಡಗು 195, ಕೋಲಾರ 77, ಕೊಪ್ಪಳ 133, ಮಂಡ್ಯ 182, ಮೈಸೂರು 285, ರಾಯಚೂರು 49, ರಾಮನಗರ 25, ಶಿವಮೊಗ್ಗ 177, ತುಮಕೂರು 210, ಉಡುಪಿ 85, ಉತ್ತರ ಕನ್ನಡ 106, ವಿಜಯಪುರ 73, ಯಾದಗಿರಿ 25.

ಬೆಂಗಳೂರು ನಗರ 15, ಮೈಸೂರು 6, ತುಮಕೂರು, ಉಡುಪಿ 4, ದಕ್ಷಿಣ ಕನ್ನಡ 3, ಧಾರವಾಡ, ಹಾಸನ, ಬೆಳಗಾವಿ 2, ಬಾಗಲಕೋಟೆ, ಬಳ್ಳಾರಿ, ಬೀದರ್, ಚಾಮರಾಜನಗರ, ಚಿತ್ರದುರ್ಗ, ಹಾವೇರಿ, ಮಂಡ್ಯ, ರಾಯಚೂರು, ರಾಮನಗರ ತಲಾ ಒಬ್ಬರು ಮೃತಪಟ್ಟಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!