ಬೆಂಗಳೂರು : ರಾಜ್ಯ ಬಿಜೆಪಿಯವರಿಗೆ ಹಿಜಾಬ್ ವಿಷಯ ವರದಾನವಾಗಿ ಲಭಿಸಿದ್ದು, ಬರುವ ಚುನಾವಣೆಯವರೆಗೆ ವಿಷಯ ಜೀವಂತವಾಗಿಟ್ಟುಕೊಳ್ಳಲು ಬಿಜೆಪಿ ತೀರ್ಮಾನಿಸಿದು, ಗುಜರಾತಿನ ಬಟ್ಟೆ ಗಿರಾನಿಯೊಂದಕ್ಕೆ 50 ಲಕ್ಷ ಕೇಸರಿ ಶಾಲುಗಳಿಗೆ ಆರ್ಡರ್ ಮಾಡಿದ್ದಾರೆ. ಯಾರು ಮಾರ್ಡರ್ ಮಾಡಿದ್ದಾರೆ, ಎಲ್ಲವೂ ಗೊತ್ತಿದೆ.ಲ್ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ದೇಶದ ಆಸ್ತಿಯಾಗಿರುವ ಮಕ್ಕಳಿಗೆ ಯಾಕೆ ಪ್ರಚೋದನೆ ಕೊಡುತ್ತಿದ್ದಿರಿ ಎಂದು ಅವರು ಬಿಜೆಪಿ ನಾಯಕರಿಗೆ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಶಿವಮೊಗ್ಗ ಜಿಲ್ಲೆಯಲ್ಲಿ ಮಂತ್ರಿ ಮಗನೇ ಮೂಟೆಗಟ್ಟಲೇ ಕೇಸರಿ ಶಾಲುಗಳನ್ನು ತರಿಸಿಕೊಂಡು ಬಿಜೆಪಿ ಕಾರ್ಯಕರ್ತರ ಮೂಲಕ ಹಂಚುವ ಕೆಲಸ ಮಾಡುತ್ತಿದ್ದಾನೆ. ಮಕ್ಕಳನ್ನು ಯಾಕೆ ಹಾಳು ಮಾಡುತ್ತಿದ್ದಿರಿ. ಅವರು ಶಿಕ್ಷಣ ಹಾಳಾಗಿದೆ ಮೊದಲೇ. ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಮಕ್ಕಳಿಗೆ ಯಾಕೆ ಪ್ರಚೋದನೆ ಮಾಡುತ್ತಿದ್ದಿರಿ ಎಂದು ಕಿಡಿಕಾರಿದರು.
ಮಹಿಳೆಯರು ಧರಿಸಿರುವ ಬಟ್ಟೆಗಳಿಂದ ಅತ್ಯಾಚಾರ ಕೇಸ್‍ಗಳು ಹೆಚ್ಚಾಗುತ್ತಿವೆ ಎಂಬ ರೇಣುಕಾಚಾರ್ಯ ಹೇಳಿಕೆಗೆ ಮುತ್ತುರಾಜ್‍ನ ಬಗ್ಗೆ ನಾನು ಏನೂ ಮಾತನಾಡಲು ಹೋಗೋದಿಲ್ಲ ಎಂದು ಲೇವಡಿ ಮಾಡಿದರು. ಇನ್ನು ಬಿಕಿನಿ ಹಾಕಿಕೊಳ್ಳುತ್ತಾರೋ, ಹಿಜಾಬ್ ಹಾಕಿಕೊಳ್ಳುತ್ತಾರೋ ಅದು ಅವರಿಗೆ ಬಿಟ್ಟಿದೆ ಎಂಬ ಪ್ರಿಯಾಂಕಾ ಗಾಂಧಿ ಹೇಳಿಕೆಗೆ ಸಂವಿಧಾನದಲ್ಲಿ ಕೊಟ್ಟಿರುವ ಹಕ್ಕಿನ ಬಗ್ಗೆ ಅವರು ಮಾತನಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಹಿಜಾಬ್ ವಿವಾದದಿಂದ ಕಾಂಗ್ರೆಸ್ ಅಂತರ ಕಾಯ್ದುಕೊಳ್ಳುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು ರಾಷ್ಟ್ರಧ್ವಜ ನಮ್ಮ ಧರ್ಮ, ಅಂಬೇಡ್ಕರ್ ಕೊಟ್ಟ ಸಂವಿಧಾನ ನಮ್ಮ ಭಗವದ್ಗೀತೆ, ಕುರಾನ್, ಬೈಬಲ್. ನಾವೆಲ್ಲಾ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇವೆ ಅದಕ್ಕೆ ನಾವು ಬದ್ಧರಾಗಿದ್ದೇವೆ. ಎಲ್ಲ ಧರ್ಮಗಳಿಗೂ ಅವರವರು ಗೌರವ ಕೊಡಬೇಕು. ನಾನು ಹಿಂದು, ನಾನು ಅರ್ಜಿ ಹಾಕಿಕೊಂಡು ಹುಟ್ಟಿದ್ದೇನಾ..? ಬೆಳಿಗ್ಗೆ ಎದ್ದ ಕೂಡಲೇ ಕುಂಕುಮ, ವಿಭೂತಿ, ಗಂಧ ಹಚ್ಚಿಕೊಳ್ಳುತ್ತೇನೆ.
ಇದೆಲ್ಲಾ ಇಟ್ಟುಕೊಂಡು ಬರಬೇಡಾ..? ಕಿವಿಯಲ್ಲಿ ಓಲೆ ಹಾಕಿಕೊಳ್ಳಬೇಡ, ಮೂಗಬಟ್ಟು ಹಾಕಿಕೊಳ್ಳಬೇಡ ಎಂದರೆ ಹೇಗೆ ಆಗುತ್ತೆ. ಪಾಕಿಸ್ತಾನ ಟ್ವೀಟ್ ಬಗ್ಗೆ ದೊಡ್ಡ ದೊಡ್ಡವರು ಇದ್ದಾರೆ, ಅವರು ಉತ್ತರ ಕೊಡುತ್ತಾರೆ ಎಂದರು.
ಒಟ್ಟಿನಲ್ಲಿ ಬಿಜೆಪಿಯವರೇ ಹಿಜಾಬ್-ಕೇಸರಿ ವಿವಾದದಲ್ಲಿ ಮಕ್ಕಳನ್ನು ಪ್ರಚೋದನೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.