ಪಡೆದ ಸಾಲಕ್ಕೆ ಭದ್ರತೆಯಾಗಿ ನೀಡಿದ್ದ ಬ್ಯಾಂಕ್ ಚೆಕ್ ಬೌನ್ಸ್ ಆಗಿದ್ದದರಿಂದ ಗೋಕಾಕ ನ್ಯಾಯಾಲಯ ಪ್ರಾಚಾರ್ಯರೊಬ್ಬರ ಬಂಧನಕ್ಕೆ ಆದೇಶ ನೀಡಿದೆ.
ಧಾರವಾಡದಲ್ಲಿನ ಪ್ರಖ್ಯಾತ ಕಾಲೇಜೊಂದರ ಪ್ರಚಾರ್ಯರಾದ ದುರ್ಗಪ್ಪ ಕರದೋಣಿ ವಿಠಲ್ ಎಂಬವರಿಂದ ಕೆಲ ತಿಂಗಳ ಹಿಂದೆ 3 ಲಕ್ಷ ರೂಪಾಯಿ ಸಾಲ ಪಡೆದು ಅದಕ್ಕೆ ಭದ್ರತೆಯೆಂದು ತಮ್ಮ ಬ್ಯಾಂಕ್ ಚೆಕ್ ನೀಡಿದ್ದರು. ಹಣವನ್ನು ನಗದು ರೂಪದಲ್ಲೇ ನೀಡಿ ಚೆಕ್ ಹಿಂದಕ್ಕೆ ಪಡೆಯುವದಾಗಿಯೂ ತಿಳಿಸಿದ್ದರು.
ಆದರೆ ಹಣ ಹಿಂದಿರುಗಿಸುವ ದಿನ ಪದೇ ಪದೇ ಮುಂದಕ್ಕೆ ಹಾಕುತಿದ್ದರಿಂದ ವಿಠಲ್ ಚೆಕ್ ಬ್ಯಾಂಕಿಗೆ ಹಾಕಿದ್ದಾರೆ. ಆದರೆ “ಅಕೌಂಟ್ ನಲ್ಲಿ ಸಾಕಷ್ಟು ಚೆಕ್ ನಲ್ಲಿ ನಮೂದಿಸಿದಷ್ಟು ಹಣವಿಲ್ಲ,” ಎಂಬ ಶರಾದೊಂದಿದೆ ಹಿಂದಕ್ಕೆ ಬಂದಿದ್ದೆ.
ಪ್ರಾಚಾರ್ಯರ ವಿರುದ್ಧ ವಿಠಲ್ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಚೆಕ್ ಬೌನ್ಸ್ ಪ್ರಕರಣದಡಿ ನ್ಯಾಯಾಲಯ ಪ್ರಾಚಾರ್ಯ ಕರದೋಣಿ ಅವರ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದ್ದು ಏಪ್ರಿಲ್ 22ರಂದು ನ್ಯಾಯಾಲಯದ ಮುಂದೆ ಅವರನ್ನು ಹಾಜರು ಪಡಿಸಲು ಪೊಲೀಸರಿಗೆ ಆದೇಶಿಸಿದೆ.