ಬೆಳಗಾವಿ : ತಮ್ಮ ಮಗಳು ಕಮನೀಶ್ ಅಲಿಯಾಸ್ ಕೃಷ್ಣಾ, ತಮ್ಮ ಇಬ್ಬರು ಗಂಡು ಮಕ್ಕಳು ಬಾವೀರ್,4, ಹಾಗೂ ವಿರೇನ್,7, ಆತ್ಮಹತ್ಯೆ ಮಾಡಿಕೊಂಡದಕ್ಕೆ ಅವರ ಗಂಡನ ಮನೆಯವರ ಮಾನಸಿಕ ಕಿರುಕುಳ, ದೈಹಿಕ ಹಿಂಸೆಯೇ ಕಾರಣವೆಂದು ಕಮನೀಶ್ ಅವರ ತಾಯಿ ಆರೋಪಿಸಿದ್ದಾರೆ.
“ನಾವು ಮಗಳು ಕಮನೀಶ್ ಅವರನ್ನು ಕೃಷ್ಣಾಯೆಂದು ಕರೆಯುತ್ತೇವೆ. ಕೃಷ್ಣಾ ಯಾವಾಗಲೂ ಪತಿಯ ಮನೆಯಲ್ಲಿ ತಮಗೆ ಆಗುತ್ತಿದ್ದ ದೈಹಿಕ, ಮಾನಸಿಕ ದೌರ್ಜನ್ಯ ಕುರಿತು ದೂರುತಿದ್ದಳ್ಳು, ಸಹಿಸಿಕೊಂಡು ಹೊಗೆಂದು ನಾವೇ ಸಲಹೆ ನೀಡುತ್ತಿದ್ದೆವು,” ಎಂದು ಕೃಷ್ಣಾ ಅವರ ತಿಳಿಸಿದರು.
ಕೌಟುಂಬಿಕ ಜೀವನಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧಾರಿಸಿದ್ದ ಕೃಷ್ಣಾ
ನಿನ್ನೆ ಶುಕ್ರವಾರ ಎಂದಿನಂತೆ ಮುಂಜಾನೆ ಶಾಲೆಗೆ ಬಿಡಿಸಲು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ, ಮಧ್ಯಾಹ್ನದವರೆಗೆ ಸಮಯ ಕಳೆದ ಅವರು ಹಿಂಡಲಗಾ ಗಣಪತಿ ದೇವಸ್ಥಾನ ಪಕ್ಕದ ಚಿಕ್ಕ ಕೆರೆಗೆ ಜಿಗಿದು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
” ಮಗಳು ಕೃಷ್ಣಾ ಫೋನ್ ಮಾಡಿದಾಗೊಮ್ಮೆ ಪತಿ ಮನೆಯವರು ನೀಡುವ ಕಿರುಕುಳದ ವಿಷಯವೇ ಹೇಳುತ್ತಿದ್ದರು. ನಾವು ಎಲ್ಲವನ್ನೂ ಸಹಿಸಿಕೊಂಡು ಹೋಗುವಂತೆ ಸಲಹೆ ನೀಡುತ್ತಿದೆವು, ಆದರೆ ಇಷ್ಟೆಲ್ಲ ಸಂಭವಿದಿದೆ, ” ಎಂದು ಕೃಷ್ಣಾ ತಾಯಿ ಹೇಳಿದರು.
ಹಿಂಡಲಗಾ ರಸ್ತೆಯಲ್ಲಿರುವ ಗಣಪತಿ ಗುಡಿಯ ಪಕ್ಕದಲ್ಲಿರುವ ಮೂರು ಚಿಕ್ಕ ಕೆರೆಗಳಲ್ಲಿ ಒಂದರಲ್ಲಿ ಕೃಷ್ಣಾ ತನ್ನ ಇಬ್ಬರು ಮಕ್ಕಳನ್ನು ತೆಗೆದುಕೊಂಡು ಜಿಗಿದಿದ್ದರು.