ಮುಂಬಯಿ : ಯುದ್ಧ ಪೀಡಿತ ಉಕ್ರೈನ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ರಾಜ್ಯದ ವಿದ್ಯಾರ್ಥಿಗಳಲ್ಲಿ ರಾಜ್ಯದ ನಾಲ್ಕು ವಿದ್ಯಾರ್ಥಿಗಳು ಇಂದು ಮುಂಬಯಿ ಬಂದಿಳಿದರು.
ಉಕ್ರೈನ್ ನ ಬುಡಾಪೆಸ್ಟ್ ನಿಂದ ಬಂದ ವಿಮಾನವೊಂದರಲ್ಲಿ ಈ ವಿದ್ಯಾರ್ಥಿಗಳು ಬಂದರು. ಇವರಿಂದ ಮಾಹಿತಿ ಪಡೆದ
ಕರ್ನಾಟಕದ ನೋಡಲ್ ಅಧಿಕಾರಿಗಳು ಅವರು ಅವರವರ ಸ್ಥಳಗಳಿಗೆ ತಲುಪುವ ವ್ಯವಸ್ಥೆ ಮಾಡಿದರು.
ಚಿಕ್ಕಬಳ್ಳಾಪುರದ ಓರ್ವ ಹಾಗೂ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಸ್ವದೇಶಕ್ಕೆ ಆಗಮಿಸಿದ್ದಾರೆ.
ವಿಶ್ವನಾಥ ಚೌವ್ಹಾಣ್, ನಂದಿತಾ ರಂಗನಾಯಕ, ಸ್ನೇಹಾ ಮತ್ತಯ್ಯಪ್ಪಾ, ಲಿಖಿತಾ ಮುನಿರತ್ನಂ ಸ್ವದೇಶಕ್ಕೆ ಮರಳಿದವರು.
ರಾಜ್ಯ ಸರಕಾರ ಪ್ರತಿ ಜಿಲ್ಲೆಯಿಂದ ತಲಾ ಇಬ್ಬರು ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳೆಂದು ಮುಂಬಯಿಗೆ ಉಕ್ರೈನ್ ದಿಂದ ಹಿಂದಿರುಗುವವರಿಗೆ ನೆರವಾಗುವಂತೆ ನಿಯೋಜಿಸಿದೆ.