No menu items!
Friday, November 22, 2024

27 ವರುಷಗಳಿಂದ ಸೂರ್ಯನ ಕಿರಣಗಳನ್ನೇ ಆಹಾರ ಮಾಡಿಕೊಂಡಿದ್ದ ಸಾಧಕ ವಿಧಿವಶ

Must read

ತಿರುವನಂತಪುರ: “ಸೋಲಾರ್ ಹೆಲಿಂಗ ಟೆಕ್ನಿಕ್ಕ್ ” ಪ್ರತಪಾದಕಾರದ ಅವರ ಹೆಸರು – ಹೀರಾ ರತನ್ ಮಾಣೆಕ್ – ತಮ್ಮ 85ನೇ ವಯಸಿನಲ್ಲಿ ಮೊನ್ನೆ ಶನಿವಾರ ಇಹಲೋಕ ಯಾತ್ರೆ ಮುಗಿಸಿದ ಅವರು ತಮ್ಮ ಬದುಕಿನ ಕೊನೆಯ 27 ವರುಷಗಳಲ್ಲಿ ಸೂರ್ಯನ ಕಿರಣಗಳನ್ನು ಮಾತ್ರವೇ ಆಹಾರ ಮಾಡಿಕೊಂಡಿದ್ದರು.

ಮಾಣೆಕ್, ತಮ್ಮ ದೇಹವನ್ನು ಪ್ರಯೋಗಾಲಯವಾಗಿ ಪರಿವರ್ತಿಸಿ ಮಾನವರು ಕೇವಲ ನೀರನ್ನು ಮಾತ್ರ ಸೇವಿಸಿ ಮತ್ತು ಸೂರ್ಯನ ಶಕ್ತಿಯನ್ನು ಬಳಸಿಕೊಂಡು ಆರೋಗ್ಯಕರ ಜೀವನವನ್ನು ನಡೆಸಬಹುದು ಎಂದು ಜಗತ್ತಿಗೆ ಯಶಸ್ವಿಯಾಗಿ ಸಾಬೀತುಪಡಿಸಿದ್ದರು.

ಗುಜರಾತ್‌ ಕಚ್‌ ಗುಜರಾತಿ ಕುಟುಂಬದಲ್ಲಿ ಜನಿಸಿದ ಮಾಣೆಕ್ ಅವರು ತಮ್ಮ ಜೀವನದ ಹೆಚ್ಚು ಅವಧಿ ಕೇರಳದ ಕೋಝಿಕೋಡ್‌ನಲ್ಲಿ ಕಳೆದಿದ್ದರು. ಕುಟುಂಬದ ಹಡಗು ವ್ಯಾಪಾರದಲ್ಲಿ ಅವರು ತೊಡಗಿಸಿಕೊಂಡಿದ್ದರು. 1962ರಲ್ಲಿ ಪಾಂಡಿಚೇರಿಯ ಅರಬಿಂದೋ ಆಶ್ರಮಕ್ಕೆ ಭೇಟಿ ನೀಡಿದಾಗ ಸೌರ ಚಿಕಿತ್ಸೆ ಬಗ್ಗೆ ತಿಳಿದುಕೊಂಡಿದ್ದರು. ನಂತರ, ಸ್ವ ಆಸಕ್ತಿಯಿಂದ ಸೂರ್ಯನ ಧ್ಯಾನ ಮಾಡಲು ಪ್ರಾರಂಭಿಸಿದ್ದರು.
ಈ ವಿಧಾನವು ನಂತರ ‘HRM ವಿದ್ಯಮಾನ’ ಎಂದು ಕರೆಯಲ್ಪಟ್ಟಿತು, — ಸೂರ್ಯೋದಯದ ಒಂದು ಗಂಟೆಯೊಳಗೆ ಅಥವಾ ಸೂರ್ಯಾಸ್ತದ ಒಂದು ಗಂಟೆಯೊಳಗೆ ಬರಿಗಣ್ಣಿನಿಂದ ಸೂರ್ಯನನ್ನು ನೋಡುವುದನ್ನು ಒಳಗೊಂಡಿರುತ್ತದೆ.

ಆರಂಭದಲ್ಲಿ ಇದು ಕಠಿಣವಾಗಿದ್ದರೂ, ಏಳು ತಿಂಗಳ ಕಾಲ ನಿರಂತರವಾಗಿ ಅಭ್ಯಾಸ ಮಾಡಿದರೆ ಅರ್ಧ ಗಂಟೆ ಸೂರ್ಯನನ್ನು ನೇರವಾಗಿ ನೋಡಬಹುದು ಎಂದು ಮಾಣೆಕ್ ಸಾಬೀತುಪಡಿಸಿದರು. ಒಂಬತ್ತನೇ ತಿಂಗಳ ಹೊತ್ತಿಗೆ ದೇಹವು ಸೌರಶಕ್ತಿಯ ಸಂಗ್ರಹವಾಗುತ್ತದೆ ಮತ್ತು ಆಹಾರವಿಲ್ಲದೆ ಬದುಕಬಹುದು ಎಂದು ಅವರು ಪ್ರತಿಪಾದಿಸಿದರು.

1995ರಿಂದ ಆಹಾರ ಸೇವನೆಯಿಲ್ಲದೆ ಬದುಕಿದ್ದ ಕುತೂಹಲದ ವ್ಯಕ್ತಿ ಹೀರಾ ರತನ್ ಮಾಣೆಕ್ ಅವರು.
“ದೇಹವು ಸೂರ್ಯನಿಂದ ಶಕ್ತಿಯನ್ನು ಪಡೆದುಕೊಂಡಾಗ ಅದು ಅದು ಚಿಪ್ಪ್ ಆಗಿ ಕಾರ್ಯನಿರ್ವಹಿಸುತ್ತದೆ. ಸೂರ್ಯನಿಂದ ನೀವು ಪಡೆಯುವ ಶಕ್ತಿಯೊಂದಿಗೆ ಆಹಾರವಿಲ್ಲದೆ ನೀರನ್ನು ಮಾತ್ರ ಕುಡಿಯುವುದರಿಂದ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ,” ಎಂದು ಹೇಳುತ್ತಿದ್ದರು.

ಮಾಣೆಕ್ ಅವರು 1992 ರಿಂದ ಪೂರ್ಣ ಪ್ರಮಾಣದ ಸೂರ್ಯನ ಆರಾಧಕರಾಗಿದ್ದರು. ಸೂರ್ಯೋದಯದ ಒಂದು ಗಂಟೆಯ ನಂತರ ಮತ್ತು ಸೂರ್ಯಾಸ್ತದ ಒಂದು ಗಂಟೆಯ ಮೊದಲು ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದು ಅವರ ಆರಾಧನಾ ಕ್ರಮವಾಗಿತ್ತು. ಆರಂಭದಲ್ಲಿ ಸೂರ್ಯನನ್ನು ನೋಡುವುದು ಕೆಲವು ಸೆಕೆಂಡುಗಳ ಕಾಲ ತೆಗೆದುಕೊಳ್ಳುತ್ತದೆ. ಆದರೆ ಏಳು ತಿಂಗಳೊಳಗೆ ಅದನ್ನು ಅರ್ಧ ಘಂಟೆಯವರೆಗೆ ಹೆಚ್ಚಿಸಬಹುದು. ಒಂಬತ್ತು ತಿಂಗಳೊಳಗೆ ದೇಹವು ಶಕ್ತಿಯ ಉಗ್ರಾಣವಾಗುತ್ತದೆ. ಇದರಿಂದ ಹಸಿವು ಕಳೆದು ಆಹಾರ ತ್ಯಜಿಸಬಹುದು ಎಂದು ಅವರು ಹೇಳಿದ್ದರು.

ಜೂನ್ 1995 ರಲ್ಲಿ ಇವರು 213 ದಿನಗಳ ಕಾಲ ಉಪವಾಸ ಮಾಡಿದ್ದರು. ಈ ಪ್ರಯೋಗವು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಮತ್ತು ಬಾಯಾರಿಕೆಯಾದಾಗ ನೀರು ಕುಡಿಯುವುದನ್ನು ಒಳಗೊಂಡಿತ್ತು. ನಂತರ 2000 ಜನವರಿಯಿಂದ 2001 ಫೆಬ್ರವರಿ 15ರವರೆಗೆ ಅಂದರೆ ಸತತ 411 ದಿನಗಳ ಕಾಲ ಉಪವಾಸ ಮಾಡಿದ್ದರು.

ಗಿನ್ನಿಸ್ ದಾಖಲೆ

1995 ರಲ್ಲಿ ಕೋಝಿಕ್ಕೋಡ್‌ನಲ್ಲಿ ಅವರ 211-ದಿನಗಳ ಉಪವಾಸವು ಮಾಣೆಕ್ ಅವರನ್ನು ಖ್ಯಾತಿಗೆ ತಂದಿತು. ನಂತರ ಅವರು 2000 ರಲ್ಲಿ ಅಹಮದಾಬಾದ್‌ನಲ್ಲಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದರು, 411 ದಿನಗಳ ಉಪವಾಸವನ್ನು ಕೈಗೊಂಡರು, ಇದು ಅವರನ್ನು ಜಗತ್ತಿನಾದ್ಯಂತ ಪ್ರಸಿದ್ಧರನ್ನಾಗಿ ಮಾಡಿತು.

ಅವರು ಅಮೆರಿಕದಲ್ಲಿ ಪೆನ್ಸಿಲ್ವೇನಿಯಾ ಮತ್ತು ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳನ್ನು ನಡೆಸಿದರು. ಗಗನಯಾತ್ರಿಗಳು ಸೌರ ಹೀಲಿಂಗ್ ತಂತ್ರವನ್ನು ಅಭ್ಯಾಸ ಮಾಡಬಹುದು ಮತ್ತು ಹೆಚ್ಚು ಆಹಾರವಿಲ್ಲದೆ ಬಾಹ್ಯಾಕಾಶದಲ್ಲಿ ಬದುಕಬಹುದು ಎಂದು ಅವರು ಹೇಳಿದ್ದಾರೆ.

ಮಾಣೆಕ್, 80 ವರ್ಷ ವಯಸ್ಸಿನವರೆಗೆ ಸೌರ ಚಿಕಿತ್ಸೆ ಅಭ್ಯಾಸ ಮಾಡಿದರು. ಅವರ ಪತ್ನಿ ವಿಮಲಾ ಒಂದು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು. ಮಾಣೆಕ್ ಅವರು ನಿಧನರಾದಾಗ ಕೋಝಿಕ್ಕೋಡ್‌ನ ಆಸ್ಪತ್ರೆಯಲ್ಲಿ ಮುಳೆ ಮುರಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!