ವುಹಾನ್: ಜಾಗತಿಕವಾಗಿ ಕೊರೊನಾ ವೈರಸ್ ಪ್ರಕರಣ ತೀವ್ರ ಕುಸಿತ ಕಾಣುತ್ತಿರುವ ನಡುವೆಯೇ ಚೀನಾದಲ್ಲಿ ಈ ಸಾಂಕ್ರಾಮಿಕ ಉಲ್ಬಣಿಸಿದೆ. ಚೀನಾದಲ್ಲಿ 2021ರ ಜನವರಿ ನಂತರ ಕೊರೊನಾ ಸೋಂಕಿನಿಂದ ಮೊದಲ ಸಾವು ಸಂಭವಿಸಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಅಧಿಕಾರಿಗಳು ಶನಿವಾರ ಎರಡು ಕೊವೀಡ್ ಸಾವುಗಳನ್ನು ವರದಿ ಮಾಡಿದ್ದಾರೆ.
ಚೀನಾದಲ್ಲಿ ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ಸಮುದಾಯಕ್ಕೆ ಹರಡಿದ್ದು, ಶನಿವಾರ 2,157 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಚೀನಾದ ಜಿಲಿನ್ ಪ್ರಾಂತ್ಯದಲ್ಲೆ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ.
ಈ ಮಧ್ಯೆ ಅಂತಾರಾಷ್ಟ್ರೀಯ ಪ್ರಯಾಣವನ್ನು ನಿರ್ಬಂಧಿಸುವ ಮತ್ತು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕಗಳನ್ನು ಕಡಿತಗೊಳಿಸುವ ನಿರ್ಧಾರದಿಂದ ವ್ಯಾಪಕವಾಗಿ ಟೀಕೆಗೊಳಗಾದ ಚೀನಾ ತನ್ನ ‘ ಶೂನ್ಯ-ಕೋವಿಡ್’ ನೀತಿ ಸಡಿಲಿಸುವುದನ್ನು ತಳ್ಳಿಹಾಕಿದೆ. ಚೀನಾದಲ್ಲಿ ಕಠಿಣ
ಲಾಕ್‌ಡೌನ್‌ಗಳು ಮುಂದುವರಿದಿದೆ.
“ಶೂನ್ಯ-ಕೋವಿಡ್ ” ನೀತಿ ತಂತ್ರವು ಸಾಮೂಹಿಕ ಪರೀಕ್ಷೆ ಮತ್ತು ಕಟ್ಟುನಿಟ್ಟಾದ ಲಾಕ್‌ಡೌನ್‌ಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಎಲ್ಲಾ ಹೊಸ ಪ್ರಕರಣಗಳು ಕ್ವಾರಂಟೈನ್‌ನಲ್ಲಿ ಅಥವಾ ಸಂಪರ್ಕ ಪತ್ತೆಹಚ್ಚುವಿಕೆ ಆಗುವವರೆಗೆ ನಿವಾಸಿಗಳು ತಮ್ಮ ಮನೆಗಳನ್ನು ತೊರೆಯುವುದನ್ನು ನಿಷೇಧಿಸಲಾಗಿದೆ.