No menu items!
Thursday, November 21, 2024

ಮಗುವನ್ನು ಕರಡಿ ಬೋನಿಗೆ ಎಸೆದ ತಾಯಿ

Must read

ಉಜ್ಬೇಕಿಸ್ತಾನ : ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ತಾಯಿಯೊಬ್ಬಳು ತನ್ನ 3 ವರ್ಷದ ಮಗುವನ್ನು ಮೃಗಾಲಯದಲ್ಲಿದ್ದ ಕರಡಿ ಬೋನಿಗೆ ಎಸೆದ ಆಘಾತಕಾರಿ ಘಟನೆ ಉಜ್ಬೇಕಿಸ್ತಾನದ ಮೃಗಾಲಯವೊಂದರಲ್ಲಿ ನಡೆದಿದೆ. ಮಗುವನ್ನು ಎತ್ತಿಕೊಂಡಿದ್ದ ಮಹಿಳೆ ಪ್ರವಾಸಿಗರ ಎದುರೇ ಇದ್ದಕ್ಕಿದ್ದಂತೆ ಕೈಯಲ್ಲಿದ್ದ ಹೆಣ್ಣು ಮಗುವನ್ನು ಕರಡಿಯ ಬಳಿ ಎಸೆದಿದ್ದಾಳೆ. ಘಟನೆ ಮೃಗಾಲಯದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಡೈಲಿ ಮೇಲ್ ಪತ್ರಿಕೆ ವರದಿಯ ಪ್ರಕಾರ ಮಹಿಳೆಯ ಮಗುವನ್ನು 16 ಅಡಿಗಳಷ್ಟು ಕೆಳಗೆ ಎಸೆದಿದ್ದು, ಮಗುವನ್ನು ಸಾಯಿಸಲು ಯತ್ನಿಸಿದ್ದಾಳೆ ಎಂದು ಹೇಳಲಾಗಿದೆ. ಜೂಜು ಎಂದು ಕರೆಯಲ್ಪಡುವ ಕರಡಿಯಿದ್ದ ಜಾಗಕ್ಕೆ ಮಗುವನ್ನು ಎಸೆದಿದ್ದಾಳೆ ಎಂದು ವರದಿಯಾಗಿದೆ.

ಈ ಘಟನೆಯ ವಿಡಿಯೊವನ್ನು ಟ್ವಿಟರ್​ಲ್ಲಿ ಹಂಚಿಕೊಳ್ಳಲಾಗಿದ್ದು ವಿಡಿಯೊದಲ್ಲಿ ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಬಂದು ಕರಡಿ ಓಡಾಡುತ್ತಿರುವ ಬೋನ್​ನೊಳಗೆ ಎಸೆಯುತ್ತಾಳೆ. ತಕ್ಷಣವೇ ಮೃಗಾಲಯದ ಸಿಬ್ಬಂದಿ ಓಡಿ ಹೋಗಿ ಮಗುವನ್ನು ರಕ್ಷಿಸುವುದನ್ನು ಕಾಣಬಹುದು.
ವರದಿಯ ಪ್ರಕಾರ ಮಗುವಿಗೆ ಬಿದ್ದ ಗಾಯಗಳಾಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯನ್ನು ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಪ್ರಕರಣ ಸಾಬೀತಾದರೆ 15 ವರ್ಷ ಜೈಲು ಶಿಕ್ಷೆಗೆ ಆಗಲಿದೆ. ಈ ಕುರಿತು ಮೃಗಾಲಯದ ಸಿಬ್ಬಂದಿ ಮಾತನಾಡಿ, ಮಹಿಳೆ ಏಕಾಏಕಿ ಮಗುವನ್ನು ಕರಡಿಯ ಬಳಿ ಎಸೆದಿದ್ದಾಳೆ. ಆಕೆಯ ಉದ್ದೇಶದ ಬಗ್ಗೆ ತಿಳಿದಿಲ್ಲ. ಮಗುವನ್ನು ರಕ್ಷಿಸಲಾಗಿದೆ ಎಂದಿದ್ದಾರೆ. ಕೆಲ ವರದಿಯ ಪ್ರಕಾರ 30 ವರ್ಷದ ಮಹಿಳೆ ಪತಿಯಿಂದ ದೂರವಾಗಿ ರಷ್ಯಾದಲ್ಲಿ ವಾಸವಿದ್ದಳು. ಅವಳಿಗೆ ಇಬ್ಬರು ಮಕ್ಕಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!