ನಾಸ್ತಿಕರನ್ನು ನಂಬಲು ಸಾಧ್ಯವಿಲ್ಲ. ಕಳ್ಳರು ಮಾತ್ರ ಕಾಂಗ್ರೆಸ್‍ಗೆ ಮತ ಹಾಕುತ್ತಾರೆ. ನೀವು ನಿಜವಾದ ರಾಷ್ಟ್ರವಾದಿಯಾಗಿದ್ದರೆ ಬಿಜೆಪಿಗೆ ಮತ ಹಾಕುವಿರಿ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಜೀವನದ ನಾಲ್ಕು ನಿಯಮಗಳನ್ನು ನೆನಪಿಟ್ಟುಕೊಳ್ಳಿ ಎಂಬ ಶೀರ್ಷಿಕೆಯೊಂದಿಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ನಟಿ ಕಂಗನಾ ರಣಾವತ್
1) ಮೂರ್ಖರು ಮಾತ್ರ ಮೂರ್ಖರನ್ನು ಬೆಂಬಲಿಸುತ್ತಾರೆ.
2) ತನ್ನನ್ನೇ ನಂಬದವರಿಗೆ ದೇವರು ಮತ್ತು ನಂಬಿಕೆ ಮೇಲೆ ವಿಶ್ವಾಸವಿರುವುದಿಲ್ಲ.
3)ನಿಮ್ಮ ಅಂತರಂಗದ ಪ್ರತಿಬಿಂಬವಾಗಿರುವ ಗುರುವನ್ನು ನೀವು ಕಾಣುವಿರಿ.
ನೀವು ಸತ್ಯವಂತರಾಗಿದ್ದರೆ ಸತ್ಯವಂತ ಗುರುಗಳನ್ನೇ ಅನುಸರಿಸುವಿರಿ. ನೀವು ಒಳ್ಳೆಯವರಾಗಿಲ್ಲದಿದ್ದರೆ, ವಂಚಕರನ್ನೇ ಗುರು ಎಂದು ಕಾಣುವಿರಿ.
4) ನೀವು ಕಳ್ಳರಾಗಿದ್ದರೆ ಕಾಂಗ್ರೆಸ್‍ನ್ನು ಬೆಂಬಲಿಸುವಿರಿ. ನೀವು ನಿಜವಾದ ರಾಷ್ಟ್ರವಾದಿಯಾಗಿದ್ದರೆ ಬಿಜೆಪಿಗೆ ಮತ ಹಾಕುವಿರಿ ಎಂದಿದ್ದಾರೆ.