ಬೆಂಗಳೂರು : ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕದವರ ರಕ್ಷಣೆಗಾಗಿ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ವೆಬ್ ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸಿದೆ.
ಈ ವೆಬ್ ಪೋರ್ಟಲ್ ಮೂಲಕ ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ಜನರ ಅಗತ್ಯ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ ಎಂದು ತಿಳಿಸಲಾಗಿದೆ. ವೆಬ್ ಪೋರ್ಟಲ್ ಯುಆರ್ಎಲ್- http://ukraine.karnataka.tech ಅನ್ನು ನೋಡಲ್ ಅಧಿಕಾರಿ ಮನೋಜ ರಾಜನ್ ಮತ್ತು ತಂಡ ಕೇವಲ 12 ಗಂಟೆಯೊಳಗೆ ಈ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ.
ಉಕ್ರೇನ್‌ನಲ್ಲಿ ಸಿಲುಕಿರುವ ಕನ್ನಡಿಗರಿಗೆ ಸಂಬಂಧಿಸಿದ ಕೆಲ ದಾಖಲೆ ಸಹಿತ ಮಾಹಿತಿಯನ್ನ ನೀವು ನೀಡಬೇಕು. ಅಲ್ಲಿ ಸಿಲುಕಿರುವವರ ಜೊತೆಗಿನ ಸಂಬಂಧ, ಸಿಲುಕಿರುವ ಜನರ ಬಗ್ಗೆ ತಿಳಿಸಬೇಕು. ವಿದೇಶಾಂಗ ಸಚಿವಾಲಯ ವೆಬ್‌ಸೈಟ್ ಮಾಹಿತಿ ಹಾಗೂ ಭಾರತ ಸರ್ಕಾರದಿಂದ ಸಂಗ್ರಹಿಸಿದ ಅಗತ್ಯ ಮಾಹಿತಿ ಈ ಪೋರ್ಟಲ್ನಲ್ಲಿ ಇರಲಿದೆ.
ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಉಕ್ರೇನ್ನಲ್ಲಿನ ಭಾರತೀಯ ದೂತಾವಾಸ, ಹೆಲ್ಪ್‌ಲೈನ್ ನಂಬರ್ ಹಾಗೂ ಇ-ಮೇಲ್ ಅಡ್ರೆಸ್ ಗಳು ಇದರಲ್ಲಿ ಇರುತ್ತದೆ.. ಅಲ್ಲದೆ ಸದ್ಯದ ಸುದ್ದಿಗಳು ಕೂಡ ಇದರಲ್ಲಿ ಲಭ್ಯವಾಗುತ್ತದೆ.
ಈ ವೆಬ್ ಪೋರ್ಟಲ್ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ವಿದೇಶಾಂಗ ಸಚಿವಾಲಯದ ಕಂಟ್ರೋಲ್ ರೂಂಗೆ ಕಳುಹಿಸಲಾಗುತ್ತದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿದಾರನ ಜೊತೆ ಮಾತುಕತೆ ನಡೆಸಲಿದೆ. ಜೊತೆಗೆ ಸದ್ಯದ ಸ್ಥಿತಿಗತಿ, ಹೆಚ್ಚುವರಿ ಮಾಹಿತಿಯನ್ನು ಸಹ ಸಂಗ್ರಹಿಸಲಿದೆ.