No menu items!
Friday, December 6, 2024

ಯುದ್ಧಗ್ರಸ್ಥ ಉಕ್ರೈನ್ ನಲ್ಲಿ ಸಿಲುಕಿರುವ ಕರ್ನಾಟಕದವರ ಮಾಹಿತಿಗಾಗಿ ವೆಬ್ ಪೋರ್ಟಲ್ ಸಿದ್ದ

Must read

ಬೆಂಗಳೂರು : ಉಕ್ರೇನ್​​ನಲ್ಲಿ ಸಿಲುಕಿರುವ ಕರ್ನಾಟಕದವರ ರಕ್ಷಣೆಗಾಗಿ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ವೆಬ್ ಪೋರ್ಟಲ್​​ ಒಂದನ್ನು ಅಭಿವೃದ್ಧಿಪಡಿಸಿದೆ.

ಈ ವೆಬ್ ಪೋರ್ಟಲ್ ಮೂಲಕ ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ಜನರ ಅಗತ್ಯ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ ಎಂದು ತಿಳಿಸಲಾಗಿದೆ. ವೆಬ್ ಪೋರ್ಟಲ್ ಯುಆರ್​ಎಲ್- http://ukraine.karnataka.tech ಅನ್ನು ನೋಡಲ್​ ಅಧಿಕಾರಿ ಮನೋಜ ರಾಜನ್​ ಮತ್ತು ತಂಡ ಕೇವಲ 12 ಗಂಟೆಯೊಳಗೆ ಈ ಪೋರ್ಟಲ್​​ ಅನ್ನು ಅಭಿವೃದ್ಧಿಪಡಿಸಿದೆ.

ಉಕ್ರೇನ್​ನಲ್ಲಿ ಸಿಲುಕಿರುವ ಕನ್ನಡಿಗರಿಗೆ ಸಂಬಂಧಿಸಿದ ಕೆಲ ದಾಖಲೆ ಸಹಿತ ಮಾಹಿತಿಯನ್ನ ನೀವು ನೀಡಬೇಕು. ಅಲ್ಲಿ ಸಿಲುಕಿರುವವರ ಜೊತೆಗಿನ ಸಂಬಂಧ, ಸಿಲುಕಿರುವ ಜನರ ಬಗ್ಗೆ ತಿಳಿಸಬೇಕು. ವಿದೇಶಾಂಗ ಸಚಿವಾಲಯ ವೆಬ್‌ಸೈಟ್ ಮಾಹಿತಿ ಹಾಗೂ ಭಾರತ ಸರ್ಕಾರದಿಂದ ಸಂಗ್ರಹಿಸಿದ ಅಗತ್ಯ ಮಾಹಿತಿ ಈ ಪೋರ್ಟಲ್​ನಲ್ಲಿ ಇರಲಿದೆ.

ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಉಕ್ರೇನ್​ನಲ್ಲಿನ ಭಾರತೀಯ ದೂತಾವಾಸ, ಹೆಲ್ಪ್‌ಲೈನ್ ನಂಬರ್ ಹಾಗೂ ಇ-ಮೇಲ್ ಅಡ್ರೆಸ್ ಗಳು ಇದರಲ್ಲಿ ಇರುತ್ತದೆ.. ಅಲ್ಲದೆ ಸದ್ಯದ ಸುದ್ದಿಗಳು ಕೂಡ ಇದರಲ್ಲಿ ಲಭ್ಯವಾಗುತ್ತದೆ.

ಈ ವೆಬ್ ಪೋರ್ಟಲ್ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ವಿದೇಶಾಂಗ ಸಚಿವಾಲಯದ ಕಂಟ್ರೋಲ್ ರೂಂಗೆ ಕಳುಹಿಸಲಾಗುತ್ತದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿದಾರನ ಜೊತೆ ಮಾತುಕತೆ ನಡೆಸಲಿದೆ. ಜೊತೆಗೆ ಸದ್ಯದ ಸ್ಥಿತಿಗತಿ, ಹೆಚ್ಚುವರಿ ಮಾಹಿತಿಯನ್ನು ಸಹ ಸಂಗ್ರಹಿಸಲಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!