ಧಾರವಾಡ : ಖಾಸಗಿ ಆಸ್ಪತ್ರೆ ನಡೆಸಲು ಯಾವುದೇ ಅಡ್ಡಿ ಮಾಡದಿರಲು RMP ವೈದ್ಯರೊಬ್ಬರಿಂದ 10,000 ರೂಪಾಯಿ ಲಂಚ ಸ್ವೀಕರಿಸಿದ್ದ AAYUSH ಅಧಿಕಾರಿಯೊಬ್ಬರನ್ನು ACB ಅಧಿಕಾರಿಗಳು ಶುಕ್ರವಾರ ಧಾರವಾಡದಲ್ಲಿ ಬಂಧಿಸಿದ್ದಾರೆ
AAYUSH ಅಧಿಕಾರಿ ಆರ್.ಜಿ.ಮೇತ್ರಿ ಎಸಿಬಿ ಬಲೆಗೆ ಬಿದ್ದವರು. ಅಣ್ಣಿಗೇರಿ ಪಟ್ಟಣದ ಆರ್‍ಎಂಪಿ ವೈದ್ಯ ಹರಿಶ್ಚಂದ್ರ ನಾರಾಯಣಪುರಗೆ “ಆಸ್ಪತ್ರೆ ನಡೆಸಲು ಯಾವುದೇ ಸಮಸ್ಯೆ ಮಾಡುವುದಿಲ್ಲ, ಅದಕ್ಕೆ 20 ಸಾವಿರ ರೂಪಾಯಿ ಕೊಡಬೇಕು,” ಎಂಬ ಬೇಡಿಕೆ ಇಟ್ಟು 10 ಸಾವಿರ ರೂಪಾಯಿ ಪಡೆದುಕೊಂಡಿದ್ದರು. ಬಳಿಕ ಇಂದು ಮತ್ತೆ 10 ಸಾವಿರ ರೂಪಾಯಿ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದಾರೆ.
ಆಯುಷ್ ಅಧಿಕಾರಿ ಮೇತ್ರಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.