No menu items!
Monday, December 23, 2024

ಸತಿ-ಪತಿ ಯಾಗಲಿದ್ದಾರೆ ದೇಶದ ಕಿರಿಯ ವಯಸ್ಸಿನ ಮೇಯರ್, ಶಾಸಕ

Must read

ಕೋಝಿಕೋಡ್: ದೇಶದ ಅತ್ಯಂತ ಕಿರಿಯ ವಯಸ್ಸಿನ, ತಿರುವನಂತಪುರದ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಕೇರಳದವರೇ ಆದ ಅತ್ಯಂತ ಕಿರಿಯ ವಯಸ್ಸಿನ ಶಾಸಕ ಕೆ.ಎಂ. ಸಚಿನ್ ದೇವ್ ಅವರು ಒಂದು ತಿಂಗಳೊಳಗೆ ವಿವಾಹವಾಗಲಿದಾರೆ.

ತಿರುವನಂತಪುರದ ಮೇಯರ್ ಆಗಿರುವ ಆರ್ಯ ರಾಜೇಂದ್ರನ್, 2020 ರಲ್ಲಿ ತಮ್ಮ 21 ನೇ ವಯಸ್ಸಿನಲ್ಲಿ ಮೇಯರ್ ಆಗುವ ಮೂಲಕ ದೇಶದ ಅತ್ಯಂತ ಕಿರಿಯ ಮಹಾಪೌರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 28 ವರ್ಷ ವಯಸ್ಸಿನ ಶಾಸಕ ಸಚಿನ ದೇವ್ ಅವರು ಕೋಝಿಕ್ಕೋಡ್ ಜಿಲ್ಲೆಯ ಬಲುಸ್ಸೆರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಚಲನಚಿತ್ರ ನಟ ಧರ್ಮಜನ್ ಬೋಳಘಟ್ಟಿ ಅವರನ್ನು ಸೋಲಿಸುವ ಮೂಲಕ ಕೇರಳದ ಅತ್ಯಂತ ಕಿರಿಯ ಶಾಸಕರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆರ್ಯ ಮತ್ತು ಸಚಿನ್ ಇಬ್ಬರೂ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI)ದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ದೇವ್ ಅವರು ಎಸ್‌ಎಫ್‌ಐನ ಪ್ರಸ್ತುತ ಅಖಿಲ ಭಾರತ ಜಂಟಿ ಕಾರ್ಯದರ್ಶಿಯೂ ಆಗಿರುವ ಸಚಿನ್ ದೇವ್, ಕೋಝಿಕೋಡ್‌ನ ನೆಲ್ಲಿಕೋಡ್‌ ಮೂಲದವರು. ಸಚಿನ್ ಕೋಝಿಕ್ಕೋಡ್‌ನ ಸರ್ಕಾರಿ ಕಲಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಬ್ಯಾಚುಲರ್ ಪದವಿ ಮತ್ತು ಕೋಝಿಕೋಡ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.

ಆರ್ಯ ರಾಜೇಂದ್ರನ್ ಅವರು 2020 ರಲ್ಲಿ 21 ನೇ ವಯಸ್ಸಿನಲ್ಲಿ ತಿರುವನಂತಪುರಂ ಕಾರ್ಪೊರೇಷನ್‌ನ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗ ದೇಶದ ಅತ್ಯಂತ ಕಿರಿಯ ಮೇಯರ್‌ಗಳಲ್ಲಿ ಒಬ್ಬರಾದರು. ಅವರು ಮುದವನ್ಮುಗಲ್‌ನಿಂದ ಕೌನ್ಸಿಲರ್ ಆಗಿ ಆಯ್ಕೆಯಾದ CPI(M) ಅಭ್ಯರ್ಥಿಯಾಗಿದ್ದರು. ಆರ್ಯ, ಆ ಸಮಯದಲ್ಲಿ ಆಲ್ ಸೇಂಟ್ಸ್ ಕಾಲೇಜಿನಲ್ಲಿ ಬಿ.ಎಸ್ಸಿ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿದ್ದರು.

ನಗರ ಮೇಯರ್ ಆಗಿ ಜವಾಬ್ದಾರಿಗಳನ್ನು ನಿಭಾಯಿಸುವುದರೊಂದಿಗೆ ತನ್ನ ಅಧ್ಯಯನವನ್ನು ಮುಂದುವರಿಸುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದರು. ಆರ್ಯ ಅವರು ಎಡಪಕ್ಷದ ವಿದ್ಯಾರ್ಥಿಗಳ ಸಂಘಟನೆಯಾದ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ರಾಜ್ಯ ಸಮಿತಿಯ ಸದಸ್ಯರಾಗಿರುವುದರ ಜೊತೆಗೆ ಸಿಪಿಐ(ಎಂ) ಗೆ ಸಂಯೋಜಿತವಾಗಿರುವ ಮಕ್ಕಳ ಸಂಘಟನೆಯಾದ ಬಾಲಸಂಗಮದ ರಾಜ್ಯಾಧ್ಯಕ್ಷರಾಗಿದ್ದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!