ಲ್ಯಾಂಬೊರ್ಗಿನಿ, ಔಡಿ, ಪಾರ್ಶೆ, ಬೆಂಟ್ಲಿ ಸೇರಿದಂತೆ 4000 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಸಾಗಿಸುತ್ತಿದ್ದ ಬೃಹತ್ ಸರಕು ಸಾಗಣಿಕೆ ಹಡಗೊಂದು ಪೋರ್ಚುಗಲ್ ಬಳಿ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದೆ.
ಸಿಂಗಪುರದ ಎಂಓಎಲ್ ಶಿಪ್ ಮ್ಯಾನೇಜ್ಮೆಂಟ್ ಕಂಪನಿ ಜರ್ಮನಿಯ ಇಮ್ದಿನ್ನಿಂದ ಅಮೆರಿಕದ ರೋಡ್ ಐಲ್ಯಾಂಡ್ ಸ್ಟೇಟ್ಗೆ ಹಡಗು ಲ್ಯಾಂಬೊರ್ಗಿನಿ, ಔಡಿ, ಪಾರ್ಶೆ, ಬೆಂಟ್ಲಿ ಸೇರಿದಂತೆ ಅನೇಕ ಐಷಾರಾಮಿ ಕಾರುಗಳನ್ನು ಕಾರುಗಳನ್ನು ಸಾಗಿಸುತಿತ್ತು.
ಕಳೆದ ಫೆಬ್ರುವರಿ 17 ರಂದು ಪೋರ್ಚುಗಲ್ ಬಳಿಯ ಸೌತ್ ಆಫ್ ಅಜ್ರೂಸ್ ಬಳಿ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ನಂತರ ಪೋರ್ಚುಗಲ್ ಕರಾವಳಿ ಪಡೆಯ ರಕ್ಷಣಾ ತಂಡ ಬೆಂಕಿ ನಂದಿಸಲು ಸಾಕಷ್ಟು ಶ್ರಮವಹಿಸಿತ್ತು. ಆದರೆ, ಹಡಗು ಸಾಗರದಲ್ಲಿ ಮುಳುಗಿರುವುದು ಮಾರ್ಚ್ 1 ರಂದು ಖಚಿತಪಟ್ಟಿದೆ ಎಂದು ಶಿಪ್ ಮ್ಯಾನೇಜ್ಮೆಂಟ್ ಕಂಪನಿ ತಿಳಿಸಿದೆ.
ಎಲ್ಲ ಐಷಾರಾಮಿ ಕಾರುಗಳು ಬೆಂಕಿ ತಗುಲಿ, ನೀರಿನಲ್ಲಿ ಮುಳುಗಿವೆ ಎಂದು ಲ್ಯಾಂಬೊರ್ಗಿನಿ ಅಮೆರಿಕದ ಸಿಇಒ ಕೂಡ ಖಚಿತಪಡಿಸಿದ್ದಾರೆ.
ಘಟನೆಯಿಂದ ಒಟ್ಟು ₹2,506 ಕೋಟಿಯಷ್ಟು ಹಾನಿಯಾಗಿದ್ದು, ಕಾರುಗಳೆಲ್ಲವೂ ವಿಮೆ ಹೊಂದಿದ್ದವು ಎಂದು ವರದಿ ತಿಳಿಸಿದೆ.