ತುಮಕೂರು : ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಜನ ಅಸುನಿಗಿದ್ದು, ತಂದೆ ತಾಯಿಗಳಿಬ್ಬರು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಕಳೆದುಕೊಂಡಿದ್ದಾರೆ.
ಪಿಯೂಸಿ ಓದುತಿದ್ದ ಅಮೂಲ್ಯ ಸ್ಥಳದಲ್ಲೇ ಅಸುನಿಗಿದ್ದರು, ಪದವಿ ತರಗತಿಯಲ್ಲಿ ಓದುತ್ತಿದ್ದು ಕಾಲು ಮುರಿತಕೋಳಗಾಗಿದ್ದ ಹರ್ಷಿತಾ ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹೀಗಾಗಿ ಒಂದೇ ದಿನ ಇಬ್ಬರು ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿ ದಿಗ್ಬ್ರಮೆಗೋಳಗಾಗಿದ್ದಾರೆ.
ಹರ್ಷಿತಾ ನಿದಾನದಿಂದ ಅಪಘಾತದಲಿ ಸತ್ತವರ ಸಂಖ್ಯೆ ಆರಕ್ಕೆರಿದೆ. ಬಸ್ ಅಪಘಾತದ ನಂತರ ಪರಾರಿಯಾಗಿದ್ದ ಚಾಲಕ ರಘುವನ್ನು ಪಾವಗಡ ಪೊಲೀಸರು ಬಂಧಿಸಿದ್ದಾರೆ.
ಅಪಘಾತದಲ್ಲಿ 31 ಜನ ಗಾಯಗೊಂಡಿದ್ದಾರೆ ಎಂದು ತುಮಕೂರು ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ.