ಕಾನ್ಪುರ: ನಂಬಲಸಾದ್ಯವಾದ ಆಘಾತಕಾರಿ ಪ್ರಕರಣವೊಂದು ಕಾನಪುರ್ ದಿಂದ ವರದಿಯಗಿದ್ದು, 78-ವರುಷದ ಮಹಿಳೆಯೊಬ್ಬರು 82-ವರುಷದ ತಮ್ಮ ಪತಿಯ ವಿರುದ್ಧ ವರದಕ್ಷಿಣೆ ಹಾಗೂ ಕೌಟುಂಬಿಕ ಕಿರುಕುಳದ ದೂರನ್ನು ಪೊಲೀಸರಿಗೆ ನೀಡಿದ್ದಾರೆ.
“ನನ್ನ ಪತಿ ತವರು ಮನೆಯಿಂದ ವರದಕ್ಷಿಣೆ ರೂಪದಲ್ಲಿ ಹಣ ತರಲು ಪೀಡಿಸುತ್ತಾರೆ, ಅಲ್ಲದೇ ಕೆಲವೊಮ್ಮೆ ಮನೆಯಿಂದ ಹೊರಗೆ ಹಾಕುತ್ತಾರೆ”, ಎಂದು ಬೇರೊಬ್ಬರ ಸಹಾಯವಿಲ್ಲದೇ ನಿಂತುಕೊಳ್ಳಲೂ ಅಗ್ಗದ ತಮ್ಮ ಪತಿಯ ಗಣೇಶ್ ನರೇನ್ ಶುಕ್ಲ ವಿರುದ್ಧ ಅವರ ಪತ್ನಿ ದೂರು ಸಲ್ಲಿಸಿದ್ದಾರೆ. ಇವರ ಮದುವೆಯಾಗಿ ಐವತಕ್ಕೂ ಹೆಚ್ಚು ವರುಷಗಳಾಗಿವೆ.
ಉತ್ತರ ಪ್ರದೇಶ ಕಾನ್ಪುರ ನಗರದ ಚಕೇರಿ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ವೃದ್ಧೆಯ ದೂರಿನ ಮೇರೆಗೆ ಪೊಲೀಸರು ಮಹಿಳೆಯ ಪತಿ ಗಣೇಶ್ ನರೇನ್ ಶುಕ್ಲಾ ಮತ್ತು ಅವರ ಅಳಿಯ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವರದಕ್ಷಿಣೆ ಕಿರುಕುಳದ ಆರೋಪ ಹೊತ್ತಿರುವ ಗಣೇಶ್ ನಾರಾಯಣ್ ಶುಕ್ಲಾ ಅವರಿಗೆ ಸಪೋರ್ಟ್ ಇಲ್ಲದೆ ನಡೆಯಲು ಸಾಧ್ಯವಿಲ್ಲ. ವೃದ್ಧ ದಂಪತಿಯ ಪುತ್ರ ರಜನೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ತನ್ನ ತಾಯಿ ಎಲ್ಲಾ ಕುಟುಂಬ ಸದಸ್ಯರೊಂದಿಗೆ ಚೆನ್ನಾಗಿ ವರ್ತಿಸುತ್ತಾಳೆ ಮತ್ತು ಆದರೆ ಕೆಲವು ಸಂಬಂಧಿಕರ ಪ್ರಭಾವದಿಂದ ಅವರು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ಇಡೀ ವಿಷಯವು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದೆ. “ನನ್ನ ತಂದೆ ತನ್ನ ವಿರುದ್ಧ ವರದಕ್ಷಿಣೆಗಾಗಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿದಾಗ ಆಘಾತಕ್ಕೊಳಗಾದರು” ಎಂದು ಮಗ ಹೇಳಿದರು.
ಇದೇ ವೇಳೆ ವಕೀಲ ಶಿವೇಂದ್ರ ಕುಮಾರ್ ಪಾಂಡೆ ಮಾತನಾಡಿ, ಬೆಳಕಿಗೆ ಬಂದಿರುವ ಅಂಶಗಳ ಪ್ರಕಾರ ವರದಕ್ಷಿಣೆ ಕಾನೂನನ್ನು ದುರುಪಯೋಗಪಡಿಸಿಕೊಂಡು ಕುಟುಂಬದ ಹಿರಿಯರನ್ನು ಸಿಲುಕಿಸಲಾಗಿದೆ. ಮದುವೆಯಾಗಿ ಇಷ್ಟು ವರ್ಷಗಳಾದ ನಂತರ ವರದಕ್ಷಿಣೆ ಕಿರುಕುಳದ ಆರೋಪದಲ್ಲಿ ಅರ್ಥವಿಲ್ಲ. ಪ್ರಸ್ತುತ, ಈ ವಿಷಯವು ಮಧ್ಯಸ್ಥಿಕೆ ಕೇಂದ್ರದಲ್ಲಿದೆ, ಆದ್ದರಿಂದ ಎರಡು ಪಕ್ಷಗಳ ನಡುವಿನ ಪರಸ್ಪರ ಮಾತುಕತೆಯಿಂದ ವಿವಾದವನ್ನು ಇತ್ಯರ್ಥಪಡಿಸಬಹುದು ಎಂದು ಪಾಂಡೆ ಹೇಳಿದರು.