ಮುಂಬಯಿ : 75ಕ್ಕೂ ಹೆಚ್ಚು ವರ್ಷಗಳಿಂದ 36 ಭಾಷೆಗಳಲ್ಲಿ ಲಕ್ಷಾಂತರ ಹಾಡುಗಳನ್ನು ಹಾಡಿರುವ ಲತಾ ಮಂಗೇಶ್ಕರ್ 1929ರ ಸೆಪ್ಟೆಂಬರ್ 28ರಲ್ಲಿ ಜನಿಸಿದರು. ಲತಾ ಮಂಗೇಶ್ಕರ್ ವೃತ್ತಿ ಜೀವನದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಅವರ ವೈಯಕ್ತಿಕ ಜೀವನ ಮಾತ್ರ ಅಷ್ಟೇನೂ ಸುಖಕರವಾಗಿರಲಿಲ್ಲ. ಮಧ್ಯಮ ಆದಾಯದ ತುಂಬು ಕುಟುಂಬದ ಹಿರಿಯ ಮಗಳಾದ ಅವರ ಮೇಲೆ ಚಿಕ್ಕ ವಯಸಿನಲ್ಲೇ ಮನೆಯ ಜವಾಬ್ಧಾರಿ ಬಂದು ಅವರ ಬದುಕು ತಮ್ಮ ವೈಯಕ್ತಿಕ ಜೀವನಕಿಂತ ಕುಟುಂಬದ ಹಿತಕ್ಕೆ ಮೀಸಲಾಗಿಡಲ್ಪಡುತ್ತದೆ.
ತಮ್ಮ ಆಟವಾಡುವ 13ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಕುಟುಂಬದ ಸಂಪೂರ್ಣ ಜವಾಬ್ದಾರಿ ಲತಾ ಹೊತ್ತುಕೊಂಡು, ಎಲ್ಲರೂ ನೆಮ್ಮದಿಯಾಗಿರುವಂತೆ ಪ್ರಯತ್ನಿಸುತ್ತಾರೆ. ಅದಕ್ಕಾಗಿ ತಮ್ಮ ವೈಯಕ್ತಿಕ ಜೀವನದ ಕುರಿತು ಮರೆತುಬಿಟ್ಟು ಕುಟುಂಬಕ್ಕೆ ಹೆಗಲಾಗುತ್ತಾರೆ.
ತಮ್ಮ 13ನೇ ವಯಸ್ಸಿಗೇ ಅಪ್ಪನನ್ನು ಕಳೆದುಕೊಂಡು ಅಮ್ಮ, ತಮ್ಮ ಹಾಗೂ ತಂಗಿಯಂದಿರ ಜವಾಬ್ದಾರಿಯನ್ನು ಹೊತ್ತ ಅವರು ತಮ್ಮ-ತಂಗಿಯರ ವಿದ್ಯಾಭ್ಯಾಸಕ್ಕಾಗಿ ನಾಟಕ, ಅಭಿನಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬಳಿಕ ಗಾಯಕಿಯಾಗಿ ಪ್ರಸಿದ್ಧಿ ಪಡೆದ ಅವರು ತಮ್ಮ-ತಂಗಿಯರಿಗೆ ಮದುವೆ ಮಾಡಿದರು.
ಅವರೆಲ್ಲರ ಜೀವನವನ್ನು ಸೆಟಲ್ ಮಾಡಬೇಕೆಂದು ತಮ್ಮ ಖುಷಿಯನ್ನು ತ್ಯಾಗ ಮಾಡಿದ್ದ ಅವರು ನಂತರ ತಮ್ಮ-ತಂಗಿಯರ ಮಕ್ಕಳ ಆರೈಕೆಯಲ್ಲೇ ತಮ್ಮ ಖುಷಿಯನ್ನು ಕಂಡುಕೊಂಡರು. ಲತಾ, ವ್ಯಕ್ತಿಯೊಬ್ಬರನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದರು ಆದರೆ ಅವರನ್ನು ಮದುವೆಯಾಗಲು ಸಾಧ್ಯವಾಗದ ಕಾರಣದಿಂದ ಅವರು ತಮ್ಮ ಜೀವನದಲ್ಲಿ ಬೇರೆ ಯಾರನ್ನೂ ಮದುವೆಯಾಗುವುದಿಲ್ಲ ಎಂಬ ನಿರ್ಧಾರ ಮಾಡಿದ್ದರು, ಹಾಗೆಯೇ ಬದುಕಿದರು.