No menu items!
Friday, December 6, 2024

ರಾಜ್ಯದಲ್ಲಿ ಕೊರೋನಾ ದಿಡೀರ್ ಇಳಿಕೆ, ಬೆಳಗಾವಿಯಲ್ಲಿ ಸೊಂಕಿತರಿಗಿಂತ ಗುಣವಾದವರೇ ಹೆಚ್ಚು

Must read

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೊಂಕೀತರ ಸಂಖ್ಯೆಯಲ್ಲಿ ಇಳಿತರ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 8,425 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಬೆಳಗಾವಿಯಲ್ಲಿ 221 ಜನರಲ್ಲಿ ಸೋಂಕು ಕಂಡುಬಂದಿದ್ದರೆ, 568 ಸೊಂಕಿತರು ಗುಣವಾಗಿದ್ದಾರೆ, ಇಬ್ಬರು ಸೊಂಕಿತರು ಅಸುನಿಗಿದ್ದಾರೆ.

ಈ ವರುಷದ ಮೊದಲನೇ ದಿನ ಒಂದು ಸಾವಿರವಿದ್ದ ಮೂರನೇ ಅಲೆ ರಾಜ್ಯದಲ್ಲಿ ತನ್ನ ಅಟ್ಟಹಾಸ ಪ್ರದರ್ಶಿಸಿತ್ತು, ಈ ತಿಂಗಳ ಮೊದಲೇರಡು ದಿನ – ಸೊಂಕೀತರ ಸಂಖ್ಯೆ ದೇಶದಲ್ಲೇ ಅತೀ ಹೆಚ್ಚು ಅಂದರೆ 50,000 ದಾಟಿತ್ತು, ಈಗ 8,000ಕೀಳಿದಿದೆ.

ರಾಜ್ಯದಲ್ಲಿ ಇಂದು 47 ಸೊಂಕಿತರು ಮೃತಪಟ್ಟಿದ್ದು, ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 39,347ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ ಇಂದು 3,822 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 17,57,458ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ ಕೊರೋನಾದಿಂದ 17 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.

ರಾಜ್ಯದಲ್ಲಿ ಇಂದು 19,800 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 37,58,997ಕ್ಕೆ ಏರಿಕೆಯಾಗಿದೆ. ಇನ್ನು 97,781 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ದೈನಂದಿನ ಕೋವಿಡ್ ಪಾಸಿಟಿವಿಟಿ ದರ ಶೇ. 6.51ಕ್ಕೆ ಇಳಿಯುವ ಮೂಲಕ ಒಂದಂಕಿಗೆ ಕುಸಿದಿದೆ. ಸಾವಿನ ಪ್ರಮಾಣ ಶೇ. 055ರಷ್ಟಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!