ಬೆಳಗಾವಿ : ಹಿಂಡಲಗಾ ರಸ್ತೆಯಲ್ಲಿರುವ ಗಣಪತಿ ಮಂದಿರದ ಬಳಿಯಿರುವ ಕೆರೆಯಲ್ಲಿ ತಮ್ಮಿಬ್ಬರು ಮಕ್ಕಳೊಂದಿಗೆ ಬಿದ್ದು ಸಹ್ಯಾದ್ರಿ ನಗರದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷ್ಣಾ ಎಂಬ ಹೆಸರಿನ 36 ವರುಷದ ಮಹಿಳೆ, ತಮ್ಮ ಮಕ್ಕಳಾದ 4 ವರುಷದ ಭಾವೀರ್ ಹಾಗೂ ವೀರೇನ್ ಎಂಬವರೊಂದಿಗೆ ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷ್ಣಾ ಹಾಗೂ ಭಾವೀರ್ ಅವರ ಮೃತ ದೇಹಗಳನ್ನು ನೀರಿನಿಂದ ಮೇಲಕ್ಕೆತಲಾಗಿದೆ, ವೀರೇನ್ ಅವರ ಶೋಧ ಮುಂದುವರೆದಿದೆ.
ಕೃಷ್ಣಾ ಅವರ ಈ ನಿರ್ಧಾರಕ್ಕೆ ಕಾರಣ ತಿಳಿದು ಬಂದಿಲ್ಲ. ಕ್ಯಾಂಪ್ ಪೊಲೀಸರು ತನಿಖೆ ನಡೆಸಿದ್ದಾರೆ.