ನವದೆಹಲಿ: ವಿದ್ಯಾರ್ಥಿಗಳು ಯಾವುದೇ ಧರ್ಮದವರಾದರೂ ಶಾಲೆಗಳು ಮತ್ತು ಕಾಲೇಜುಗಳು ಸೂಚಿಸಿದ ಡ್ರೆಸ್ ಕೋಡ್ ಅನ್ನು ಎಲ್ಲಾ ವಿದ್ಯಾರ್ಥಿಗಳು ತ ಅನುಸರಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಶಾ, “ಶಾಲಾ-ಕಾಲೇಜುಗಳಲ್ಲಿ ಮಕ್ಕಳನ್ನು ಧರ್ಮಕ್ಕಿಂತ ಮಿಗಿಲಾಗಿ ನೋಡಬೇಕು. ತಮ್ಮ ಧರ್ಮ ಯಾವುದೇ ಇದ್ದರೂ ಶಾಲೆಗಳಲ್ಲಿ ವಿದ್ಯಾರ್ಥಿಯು ಕಡ್ಡಾಯ ಮಾಡಿದ ಸಮವಸ್ತ್ರವನ್ನು ಅನುಸರಿಸಬೇಕು ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ,” ಎಂದು ಅವರು ಹೇಳಿದರು.
“ವಿಷಯವು ನ್ಯಾಯಾಲಯದಲ್ಲಿದೆ ಮತ್ತು ನ್ಯಾಯಾಲಯದ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕು … ನ್ಯಾಯಾಲಯವು ತನ್ನ ತೀರ್ಪು ನೀಡುವವರೆಗೂ ನನ್ನ ವೈಯಕ್ತಿಕ ನಂಬಿಕೆ ಹೀಗಿದೆ. ಆದರೆ ನ್ಯಾಯಾಲಯವು ತನ್ನ ತೀರ್ಪು ನೀಡಿದ ನಂತರ ನಾನೂ ಸಹ ಅದನ್ನು ಒಪ್ಪಿಕೊಳ್ಳಬೇಕು,” ಎಂದು ಅವರು ಹೇಳಿದರು.
ಕಳೆದ ತಿಂಗಳು ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ತಲೆಗೆ ರುಮಾಲು ಹಿಜಾಬ್ ತರಗತಿಗೆ ಹಾಜರಾಗಿದ್ದ ಆರು ವಿದ್ಯಾರ್ಥಿಗಳು ನಿಗದಿತ ವಸ್ತ್ರ ಸಂಹಿತೆ ಉಲ್ಲಂಘಿಸಿದ್ದರಿಂದ ಕಾಲೇಜಿಗೆ ಪ್ರವೇಶ ನಿಷೇಧಿಸಿದಾಗ ಹಿಜಾಬ್ ಗಲಾಟೆ ಶುರುವಾಗಿತ್ತು.
ಈ ವಿಚಾರದಲ್ಲಿ ರಾಜಕೀಯ ಮಾಡಲು ಯತ್ನಿಸುತ್ತಿರುವ ವಿರೋಧಿಗಳು ಯಶಸ್ವಿಯಾಗುವುದಿಲ್ಲ. ಅವರ ಪ್ರಯತ್ನಗಳು ವಿಫಲವಾಗುತ್ತವೆ ಎಂದು ಗೃಹ ಸಚಿವರು ಹೇಳಿದರು.
ಈ ವಿಷಯವು ದೊಡ್ಡ ವಿವಾದಕ್ಕೆ ಕಾರಣವಾಯಿತು ಮತ್ತು ಕರ್ನಾಟಕ ಹೈಕೋರ್ಟ್‌ನಲ್ಲಿ ಈ ವಿಷಯದ ವಿಚಾರಣೆ ನಡೆಯುತ್ತಿದೆ.