ವಿಜಯಪುರ : ವಿಜಯಪುರ ನಗರದ ಪೋಲಿಸ್ ಪೆರೇಡ್ ಮೈದಾನದಲ್ಲಿ ಭಾನುವಾರ ಸಾಕಿದ ಶ್ವಾನಗಳ ಪ್ರದರ್ಶನ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಜಿಲ್ಲಾ ಪ್ರಾಣಿ ದಯಾಸಂಘ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘ ಜಿಲ್ಲಾ ಘಟಕ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಶ್ವಾನಗಳ ಪ್ರದರ್ಶನದಲ್ಲಿ 26 ವಿವಿಧ ತಳಿಯ ಶ್ವಾನಗಳು ಭಾಗವಹಿಸಿದ್ದವು.
ಪ್ರದರ್ಶನಕ್ಕೆ 200 ಶ್ವಾನಗಳ ಮಾಲೀಕರು ಪ್ರದರ್ಶನಕ್ಕೆ ನೊಂದಣಿ ಮಾಡಿಕೊಂಡಿದ್ದರು.
ಪ್ರದರ್ಶನದಲ್ಲಿ ದೇಶ ವಿದೇಶಗಳ ಶ್ವಾನಗಳು ಕಂಡು ಬಂದವು. ಹೈದ್ರಾಬಾದ್, ಕೋಲ್ಹಾಪುರ, ರಾಣಿಬೆನ್ನೂರ, ಜಮಖಂಡಿ, ಮುಧೋಳ, ವಿಜಯಪು, ಬಾಗಲಕೋಟೆ ಚಿಕ್ಕೋಡಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯಿಂದ ಸಹಿತ ಶ್ವಾನಗಳ ಮಾಲೀಕರು ತಮ್ಮ ಶ್ವಾನಗಳನ್ನು ಪ್ರದರ್ಶನಕ್ಕೆ ತಂದಿದ್ದರು. 50 ಸಾವಿರದಿಂದ ಹಿಡಿದು 1.50 ಲಕ್ಷ ಬೆಲೆಬಾಳುವ ಶ್ವಾನಗಳನ್ನು ಸಹಿತ ಪ್ರದರ್ಶನಕ್ಕೆ ತಂದಿದ್ದರು. ಅದರಲ್ಲೂ ಪ್ರಮುಖವಾಗಿ ಮುದೋಳ ಹಾಂಡ, ಜರ್ಮನ್ ಶೆಫರ್ಡ, ರಾಟ್ ವಿಲರ್, ಲ್ಯಾಬ್ರಡಾರ್, ಕೇನ್ಕೋರ್ಸ, ಅಮೇರಿಕನ್ ಬುಲ್ಲಿ, ಬಾಕ್ಸರ್, ಕಾಕರ್ ಸ್ಪ್ಯಾನಿಯಲ್, ಲ್ಹಾಸಪ್ಸಾ, ಗ್ರೇಡ್ಡೆನ್, ಪಮೆರಿಯನ್, ಫುಟ್ಬುಲ್ ಹೀಗೆ ವಿವಿಧ ತಳಿಯ ನಾಯಿಗಳು ಎಲ್ಲರ ಗಮನ ಸೆಳೆದವು.