No menu items!
Friday, December 27, 2024

ಹಿಜಾಬ್ ಧರಿಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು

Must read

ಕಲಬುರಗಿ: ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಭಾವನೆಯನ್ನು ಬಿಂಬಿಸುವ ವಸ್ತ್ರಗಳನ್ನು ಧರಿಸುವಂತಿಲ್ಲ, ಗುರುತುಗಳನ್ನು ದೇಹದ ಮೇಲೆ ಚಿತ್ರೀಸಿಕೊಳ್ಳುವಂತಿಸಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದರೂ, ಇಂದು ಸೋಮವಾರ ಕಲಬುರಗಿ ನಗರದ ಉರ್ದು ಶಾಲೆಯ ವಿದ್ಯಾರ್ಥಿನಿಯರು ಶಾಲೆಗೆ ಹಿಜಬ್ ಧರಿಸಿ ಆಗಮಿಸಿದರು.

ಇಂದಿನಿಂದ ಪ್ರೌಢ ಶಾಲೆಯ ಪ್ರಾರಂಭದ ಹಿನ್ನಲೆ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಉರ್ದು ಪ್ರೌಢ ಶಾಲೆಯ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರು, ಹಿಜಬ್ ಧರಿಸಿ ಶಾಲಾ ಕೊಠಡಿಯಲ್ಲಿ ಕುಳಿತಿದ್ದರು.

ಮಾಧ್ಯಮದವರು ಆಗಮಿಸುತ್ತಿದ್ದಂತೆ ಶಿಕ್ಷಕರು, ಕ್ಲಾಸ್ ರೂಮ್​ಗೆ ತೆರಳಿ ಹಿಜಾಬ್ ತೆಗೆಯುವಂತೆ ಸೂಚನೆ ನೀಡಿದ್ದಾರೆ. ಶಿಕ್ಷಕರ ಸೂಚನೆ ಮೇರೆಗೆ ಹಿಜಾಬ್ ತೆಗೆದು ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ.

ವಿದ್ಯಾರ್ಥಿನಿಯರು ಹಳ್ಳಿಗಳಿಂದ ಬಂದಿದ್ದು, ಅವರಿಗೆ ಹೈಕೋರ್ಟ್ ಆದೇಶದ ಮಾಹಿತಿ ಇಲ್ಲದ ಕಾರಣ ಕ್ಲಾಸ್ ರೂಮ್​ಲ್ಲಿ ಹಿಜಾಬ್ ಧರಿಸಿಯೇ ಕುಳಿತಿದ್ದರು. ಈ ವಿಷಯ ಶಿಕ್ಷಕರ ಗಮನಕ್ಕೆ ಬರುತ್ತಿದಂತೆ ಹಿಜಾಬ್ ತೆಗೆಸಲಾಗಿದೆ. ಹೈಕೋರ್ಟ್ ಆದೇಶ ಉಲ್ಲಂಘನೆ ಆಗಿಲ್ಲ ಎಂದು ಶಾಲೆಯ ಶಿಕ್ಷಕರು ತಿಳಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!