ಬೆಳಗಾವಿ : ನಿನ್ನೆ ಮಧ್ಯಾಹ್ನ ಹಿಂಡಲಗಾ ಗಣಪತಿ ಗುಡಿಯ ಪಕ್ಕದ ಅರಗಾನ್ ತಲಾಬ್ (ಅರಗಾನ್ ಕೆರೆ ) ಯಲ್ಲಿ ಬಿದ್ದಿದ್ದ ಏಳು ವರುಷದ ವಿರೇನ್ ಕೇಶಲಾನಿ ಅವರ ಶವ ಇಂದು ಶನಿವಾರ ಮಧ್ಯಾಹ್ನ ಪಟ್ಟೆಯಾಗಿದೆ.
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಸಹ್ಯಾದ್ರಿ ನಗರದ ಕ್ರಿಷಾ ಕೇಶಲಾನಿ ಎಂಬ ಮಹಿಳೆ ತಮ್ಮಿಬ್ಬರು ಮಕ್ಕಳಾದ ವಿರೇನ್ ಹಾಗೂ ನಾಲ್ಕು ವರುಷದ ಬಾವೆಶ್ ಅವರೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಕೆರೆಗೆ ಬಿದ್ದಿದ್ದರು. ಮಧ್ಯಾಹ್ನ ಕೆರೆಗೆ ಬಿದ್ದಿದ್ದ ಅವರ ಮೃತದೇಹ ಸಂಜೆ ಪಟ್ಟೆಯಾಗಿದ್ದವು, ವಿರೇನ್ ಅವರ ಮೃತದೇಹ ಇಂದು ಮಧ್ಯಾಹ್ನ ಕಂಡು ಬಂದಿದೆ.
ಕ್ರಿಷ್ ಅವರ ತಾಯಿ ತಮ್ಮ ಮಗಳದು ಆತ್ಮಹತ್ಯೆಯಲ್ಲ ಅದೊಂದು ಕೊಲೆ ಯಾಕಂದರೆ ಗಂಡನಿಂದ ಅವಳಿಗೆ ಆಗುತ್ತಿದ್ದ ಮಾನಸಿಕ ಹಿಂಸೆಗೆ ಅವಳು ಅತಿಯಾಗಿ ನೊಂದಿದ್ದಳು, ಸಹಿಸಿಕೊಳ್ಳಲು ಆಗದೆ ಇಂತಹ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ದೂರಿದ್ದಾರೆ.