ಹುಬ್ಬಳ್ಳಿ : ಹುಬ್ಬಳ್ಳಿಯ ಗಬ್ಬುರ್ ರಸ್ತೆಯಲ್ಲಿರುವ ಕೆಎಲ್ಈ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಗಾಂಜಾ ಗಿಡಗಳನ್ನು ಬೆಳೆಯಲಾಗಿದೆ.
ಮಹಾವಿದ್ಯಾಲಯದ ಆವರಣದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಕಳೆದ ಹಲವು ವಾರಗಳಿಂದ ನಡೆದಿದ್ದು, ಕಟ್ಟಡ ಕಾಮಗಾರಿಗೆ ಬರುವ ಕೆಲವರು ಆವರಣದ ವಿವಿಧ ಬಾಗಗಳಲ್ಲಿ ಗಿಡಗಳನ್ನು ಬೆಳೆಸಿದ್ದು, ಅವುಗಳನ್ನು ಸ್ವಂತಕ್ಕಾಗಿ ಬಳಸಿಕೊಂಡಿದ್ದಾರೆ. ಎಲ್ಲ ಸಸಿಗಳನ್ನು ಒಂದೇ ಕಡೆ ನೆಟ್ಟರೆ ಸಿಕ್ಕಿಬಿಡುವದು ಖಚಿತವೆಂದು ಬಿಡಿ ಬಿಡಿ ಗಿಡಗಳನ್ನು ಬೇರೆಬೇರೆ ಕಡೆ ಬೆಳೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಆವರಣಕ್ಕೆ ದಾಳಿಯಿಟ್ಟ ಕಸಬಾಪೇಟ್ ಪೊಲೀಸರು ಐವರು ಕಟ್ಟಡ ನಿರ್ಮಾಣಿಕರನ್ನು ವಶಕ್ಕೆ ಪಡೆದಿದ್ದಾರೆ.