ಬೆಳಗಾವಿಯ ಹಿಂಡಲಗಾ ಗಣೇಶ ಮಂದಿರ ಹತ್ತಿರವಿರುವ ಅರ್ಗನ್ ತಾಲಾಬ್‍ನಲ್ಲಿ (ನೀರಿನ ಹೊಂಡ) ಕಳೆದ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡ ಕ್ರಿಷಾ ಕೇಶ್ವಾನಿ ಹಾಗೂ ಅವರ ಇಬ್ಬರು ಪುಟ್ಟ ಮಕ್ಕಳ ಬೃತದೇಹಗಳನ್ನು ತೆಗೆದುಕೊಳ್ಳಲು ಅವರ ತವರು ಮನೆಯವರು ನಿರಾಕರಿಸಿ, ತಮ್ಮ ಮಗಳು ತನ್ನ ಮಕ್ಕಳೊಂದಿಗಿನ ಆತ್ಮಹತ್ಯೆ, ಆತ್ಮಹತ್ಯೆಯಲ್ಲ ಅದು ಕೊಲೆ. “ಎಲ್ಲಿಯವರೆಗೆ ಕೊಲೆ ಆರೋಪಿಗಳಾದ ಕ್ರಿಷಾ ಪತಿಯ ಮನೆಯವರನ್ನು ಬಂಧಿಸುವದಿಲ್ಲವೋ ಅಲ್ಲಿಯವರೆಗೆ ಶವಗಳ ಸಂಸ್ಕಾರವೇನು ಅವುಗಳನ್ನು ಮುಟ್ಟುವದೇ ಇಲ್ಲ,” ವೆಂದು ನಿರ್ಧರಿಸಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಕ್ರಿಷಾ ಸಂಬಂದಿಕರು ಆರೋಪಿಗಳ ಪರವಾಗಿ ತಮ್ಮ ಸ್ಥಳೀಯ ಸಿಂಧಿ ಸಮಾಜ ನಿಂತಿದೆ. ಸಿಂಧಿ ಪಂಚಾಯತ್‍ನ ಜನರಿಂದ ಕೇಸ್ ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಡತರಲಾಗುತ್ತಿದೆ. ಒಂದು ವೇಳೆ ಕೇಸ್ ಹಿಂದಕ್ಕೆತೆಗೆದುಕೊಳ್ಳದಿದ್ದರೇ, ಸತ್ತವಳ ವಿಡೀಯೋ ವೈರಲ್ ಮಾಡಿ ಹೆಸರುಕೆಡಿಸುವ ಬೆದರಿಕೆ ಹಾಕಲಾಗುತ್ತಿದೆ. ಎಫ್ ಅಯ್ ಆರ್ ದಾಖಲಿಸಲು ಉದ್ಧೇಶಪೂರ್ವಕವಾಗಿ ತಡಮಾಡಿ ಆರೋಪಿಗಳು ಪರಾರಿಯಾಗಲು ಅವಕಾಶ ನೀಡಲಾಗಿದೆ.
“ವೀಕಿ ಛತಾನೀ, ಮನೀಷ್ ಕೇಶವಾನಿ, ಆರತಿ ಕೇಶವಾನಿ, ಮೀನಾ ಕೇಶವಾನಿ ಪೂಜಾಕರಾಡೆ ಅವರನ್ನ ಬಂಧಿಸಬೇಕು ಅಲ್ಲಿಯ ವರೆಗೂ ನಾವೂ ಮೃತದೇಹಗಳನ್ನು ಮುಟ್ಟುವುದಿಲ್ಲ,” ಎಂದು ಮೃತಳ ಸಹೋದರಿ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯ ಸಹ್ಯಾದ್ರಿ ನಗರದ 36- ವರುಷದ ಎರಡು ಮಕ್ಕಳ ತಾಯಿ ಕ್ರಿಷಾ ಕೇಶ್ವಾನಿ ಕೌಟುಂಬಿಕ ಸಮಸ್ಯೆಗಳಿಗೆ ಮನನೊಂದು ಶುಕ್ರವಾರ ಅರಗನ್ ತಾಲಾಬ್‍ಗೆ ಹಾರಿ ತನ್ನಇಬ್ಬರು ಮಕ್ಕಳು ಭಾವಿರ್ (4), ವೀರೇನ್ (7), ಜೊತೆಗೆ ಆತ್ಮಹತ್ಯೆಗೆ ಶರಣಾಗಿದ್ದರು.
ಅದೇ ದಿನ ಸಾಯಂಕಾಲ ಎಸ್‍ಡಿಆರ್‍ಎಫ್.ಹಾಗೂ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಾಯಿ ಹಾಗೂ ಭಾವೀರ್ ಮೃತದೇಹವನ್ನ ಹೊರತೆಗೆದಿದ್ದಾರೆ.
ನಿನ್ನೆ ಶನಿವಾರ ವೀರೇನ್ ಮೃತದೇಹವನ್ನು ಹೊರ ತೆಗೆಯಲಾಗಿದೆ. ನಿನ್ನೆ ಮೂರು ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಆದರೇ ಮೃತರ ಸಂಬಂಧಿ ಅಭಿಜೀತ್ ಎಂಬವರು ಆರೋಪಿಗಳನ್ನ ಪರಾರಿಯಾಗಲು ಅನುವು ಮಾಡಿಕೊಟ್ಟಿದ್ದಾರೆ. ಎಫ್‍ಐಆರ್ ನೀಡಲೂ ಕೂಡ ತಡ ಮಾಡಲಾಗಿದೆ. ಆರೋಪಿಗಳನ್ನ ಬಂಧಿಸಬೇಕು, ಉದ್ಧೇಶಪೂರ್ವಕವಾಗಿ ಎಫ್ ಅಯ್ ಆರ್ ದಾಖಲಿಸಲು ತಡ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.