ಮೈಸೂರು : ನಂದಿ ಬೆಟ್ಟದ ಪಕ್ಕದಲ್ಲಿ ಇರುವ ಬ್ರಹ್ಮ ಗಿರಿ ಬೆಟ್ಟಕ್ಕೆ ಟ್ರೇಕಿಂಗ್ ಮಾಡಲು ಬಂದಿದ್ದ ಯುವಕನೊಬ್ಬ ಬೆಟ್ಟದ ಮೇಲೆ ಮೊಬೈಲ್ ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ಸುಮಾರು 300 ಅಡಿ ಆಳದ ಪ್ರಪಾತದಲ್ಲಿ ಬಿದ್ದಿದ್ದಾನೆ.
ದೆಹಲಿ ಮೂಲದ ಯುವಕ ನಿಶಾಂಕ್ ಕೌಲ್, ಗೆಳೆಯರೊಂದಿಗೆ ಬ್ರಹ್ಮ ಗಿರಿ ಟ್ರೆಕ್ಕಿಂಗ್ ಮಾಡಲು ಬಂದಿದ್ದ. ಯುವಕ ಬೆಟ್ಟದ ಕಡಿದಾದ ಭಾಗದಲ್ಲಿ ಕೆಳಗೆ ಬಿದ್ದಿದ್ದು, ಆತನಿಗೆ ಗಂಭೀರ ಗಾಯಗಳಾಗಿರುವ ಸಾಧ್ಯತೆಯಿದೆ.
ಆಳವಾದ ಕಂದಕದಲ್ಲಿ ಬಿದ್ದಿರುವ ಆತನನ್ನು ಪ್ರಪಾತದಿಂದ ಮೇಲೆತ್ತಲು ಸ್ಥಳೀಯರು ಹಾಗೂ ಸ್ನೇಹಿತರು ಪ್ರಯತ್ನಿಸೋದು ಕಷ್ಟ ಸಾಧ್ಯವಾಗಿದೆ.
ಪರ್ವತ ತುಂಬಾ ಕಡಿದಾಗಿ ಇರುವುದರಿಂದ ಆತನನ್ನು ಮೇಲೆತ್ತಲು ಪೊಲೀಸರು ಎನ್ ಡಿ ಆರ್ ಎಫ್‌ಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಆಗಮಿಸಿದ್ದು, ಈಗ ಎಸ್ಡಿಆರ್ಎಫ್ ತಂಡ ಸ್ಥಳಕ್ಕೆ ಆಗಮಿಸಿದ್ದು ಹೆಲಿಕಾಪ್ಟರ್ ಹಾಗೂ ಪ್ಯಾರಾಚೂಟ್ನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.