ಬೆಳಗಾವಿ : ಯುದ್ಧ ಸಂಭವನಿಯ ಸಾಧ್ಯತೆಯಲ್ಲಿರುವ ಉಕ್ರೈನ ದೇಶದಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರು ಹಾಗೂ ವಿಜಯಪುರ ಜಿಲ್ಲೆಯ ಒಬ್ಬರು ಇದ್ದಾರೆಂದು ಜಿಲ್ಲಾ ಪಾಲಕ ಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಮೋಘ ಚೌಗಲಾ ಹಾಗೂ ರಾಯಭಾಗ್ ತಾಲೂಕಿನ ಪ್ರಿಯಾ ನಿಡಗುಂದಿ ಹಾಗೂ ವಿಜಯಪುರ ಜಿಲ್ಲೆಯ ಒಬ್ಬರು ವಿದ್ಯಾಭ್ಯಾಸಕ್ಕಾಗಿ ಉಕ್ರೈನ್ ನಲ್ಲಿದ್ದು, ಯುದ್ಧದ ಬೀತಿಯಿರುವ ಹಿನ್ನಲೆಯಲ್ಲಿ ಅವರನ್ನು ಮರಳಿ ದೇಶಕ್ಕೆ ತರುವ ಪ್ರಯತ್ನ ನಡೆದಿದೆ. ಅವರ ಕುಟುಂಬಸ್ಥರ ಮೂಲಕ ಅವರನ್ನು ಸಂಪರ್ಕಿಸಲಾಗಿದ್ದು ಅವರು ಸುರಕ್ಷಿತರಾಗಿದ್ದಾರೆ.
ಉಕ್ರೈನ್ ನಲ್ಲಿ ನೆಲೆಸಿರುವ ಭಾರತೀಯರನ್ನು ಮರಳಿ ಕರೆತರಲು ನಿನ್ನೆ ತೆರಳಿದ್ದ ‘ಏರ್ ಇಂಡಿಯಾ’ ವಿಮಾನ ಅಲ್ಲಿ ಲ್ಯಾಂಡ್ ಆಗಲು ಅವಕಾಶದೊರೆಯದೆ ನಾಳೆ ದೇಶಕ್ಕೆ ಹಿಂದಿರುಗಲಿದೆ. ಭಾರತ 200 ಸೀಟ್ ಸಾಮರ್ಥ್ಯದ ಮೂರು ವಿಮಾನಗಳ ಮೂಲಕ ಭಾರತೀಯ ಪ್ರಜೆಗಳನ್ನು ತರಲಿದೆ. ಫೆಬ್ರವರಿ 26 ಹಾಗೂ 28ರಂದು ಮತ್ತೇ ಎರಡು ವಿಮಾನಗಳು ಭಾರತೀಯರನ್ನು ಕರೆತರಲು ತೆರಳಲಿವೆ.