ನವದೆಹಲಿ : ಯುದ್ಧಗ್ರಸ್ತ ಉಕ್ರೇನ್ನಲ್ಲಿರುವ ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ವಾಯುಪಡೆಗೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಎಂದು ಅಧಿಕೃತ ಮೂಲ ಹೇಳಿದೆ.
ವಾಯುಪಡೆಯ ಸಹಾಯ ಪಡೆದುಕೊಂಡು ಕಡಿಮೆ ಸಮಯದಲ್ಲಿ ಹೆಚ್ಚಿನ ಜನರನ್ನು ಸ್ಥಳಾಂತರಿಸಬಹುದು. ಇದು ಇದರಿಂದ ಹೆಚ್ಚು ಜನರನ್ನು ಹಿಂದಕ್ಕೆ ಕರೆಸಿಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದೆ.
ಭಾರತದ ವಾಯುಪಡೆಯು ಸಿ-17 ಗ್ಲೋಬ್ಮಾಸ್ಟರ್ ವಿಮಾನವನ್ನು ‘ಆಪರೇಷನ್ ಗಂಗಾ’ ದ ಭಾಗವಾಗಿ ಅಳವಡಿಸುವ ನಿರೀಕ್ಷೆಯಿದೆ. ಇಂದು ಬೆಳಗ್ಗೆ 182 ಭಾರತೀಯರನ್ನು ಹೊತ್ತ ವಿಮಾನವೊಂದು ಮುಂಬೈಗೆ ಬಂದಿಳಿದಿದೆ. ಉಕ್ರೇನ್ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಭಾರತೀಯ ವಿಮಾನವು ರೊಮೇನಿಯನ್ ರಾಜಧಾನಿ ಬುಕಾರೆಸ್ಟ್ ತಲುಪಿದೆ.
ಉಕ್ರೇನ್ನಲ್ಲಿದ್ದ ಅಂದಾಜು 20,000 ಭಾರತೀಯರಲ್ಲಿ ಸುಮಾರು 8,000 ಜನರು ಫೆಬ್ರವರಿ ತಿಂಗಳಲ್ಲಿ ದೇಶವನ್ನು ತೊರೆದಿದ್ದಾರೆ ಎಂದು ಸರ್ಕಾರ ಹೇಳಿದೆ.