ಬೆಳಗಾವಿ : ಬೆಳಗಾವಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮತ್ತೊಮ್ಮೆ ತಲ್ಲಣ ಉಂಟಾಗಿದೆ. ಅಪಹರಣ, ಬೆದರಿಕೆ, ಹಲ್ಲೆಗಳಿಗೆ ಸೀಮಿತಗೊಂಡಿದ್ದ ಕೋಟ್ಯಂತರ ರೂಪಾಯಿ ಚಲನವಲನದ ಕ್ಷೇತ್ರದಲ್ಲಿ ಇಂದು ಮಂಗಳವಾರ ಹತ್ಯೆಯೊಂದು ಸಂಭವಿಸಿದೆ.
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬೆಳೆಯುತ್ತಿದ್ದ ರಾಜು ಮಲ್ಲಪ್ಪ ದೊಡ್ಡನವರ ಅವರು ಭವಾನಿ ನಗರದ ಅವರ ಮನೆಯ ಸಮೀಪವೇ ಹತ್ಯೆ ಮಾಡಲಾಗಿದೆ. ಅವರಿಗಾಗಿಯೇ ಕಾಯುತ್ತಿದ್ದ ಹಂತಕರು ಅವರು ತಮ್ಮ ಕಾರ್ ಬಳಿ ಬರುತ್ತಿದಂತೆಯೇ ಕಾರದ ಪೌಡರ್ ಅವರ ಮುಖದ ಮೇಲೆ ಎರಚಿ ನಂತರ ಮಾರಕಾಸ್ತ್ರದಿಂದ ದಾಳಿಮಾಡಿ ಪರಾರಿಯಾಗಿದ್ದಾರೆ.
ರಾಜು ಅವರ ಚಲನವಲನದ ಮೇಲೆ ಗಮನವಿಟಿದ್ದ ಹಂತಕರು ಅವರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವ ತಮ್ಮ ಪತ್ನಿಯನ್ನು ನೋಡಲು ಹೋಗುವದನ್ನು ಅರಿತು ಅವರಿಗಾಗಿ ಅವರ ಮನೆಯ ಬಳಿ ಅಡಗಿ ಕಾಯುತ್ತಿದ್ದರು. ಮುಂಜಾನೆ ಸುಮಾರು ಆರು ಗಂಟೆಗೆ ಅವರು ಹೊರಗೆ ಬರುತ್ತಿದಂತೆ ಅವರ ಹತ್ಯೆ ಮಾಡಲಾಗಿದೆ.
40 ವರುಷದ ರಾಜು ಮೂಲತಃ ಬೆಳಗಾವಿ ತಾಲೂಕಿನ ಬಸ್ತ್ ವಾಡ ಗ್ರಾಮದವರು, ಆದರೆ ತಮ್ಮ ಕೆಲಸಕ್ಕೆ ಅನುಕೂಲವಾಗಲೆಂದು ಭವಾನಿ ನಗರದಲ್ಲಿ ವಾಸವಾಗಿದ್ದರು. ಇತೀಚಿಗೆ ಆರ್ಥಿಕ ವಿಷಯವಾಗಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು.
ಅವರ ಹತ್ಯೆ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.