No menu items!
Thursday, December 5, 2024

“ಟೆಸ್ಟ್ ಟ್ಯೂಬ್ “

Must read

ಆಗಷ್ಟೇ ಮದುವೆಯಾದ ಯುವವಯಸ್ಸಿನ ದಂಪತಿಗಳಿಗೆ – ತಮಗೆ ಸಂತಾನ ಭಾಗ್ಯವಿಲ್ಲದಿರುವದನ್ನು – ಅರಿತು ದಿಕ್ಕು ತೋಚದಂತಾಗುತ್ತದೆ. ಮನೆಯವರನ್ನು, ಸಂಬಂದಿಕರನ್ನು, ಸಹೋದ್ಯೋಗಿ, ಸಮಾಜವನ್ನು ಎದುರಿಸುವದು ಹೇಗೆಂಬ ದೊಡ್ಡ ಪ್ರಶ್ನೆ ಅವರ ಮುಂದೆ ಬಂದಾಗ, ಕಪ್ಪು ಮುಚ್ಚಿದ ಆಗಸದಲ್ಲಿ ಮಿಂಚು ಮೂಡಿದಂತೆ ದಶಕಗಳ ಹಿಂದೆ ವೈದ್ಯಕೀಯ ಕ್ಷೇತ್ರದ ಅದ್ಭುತವೆಂದೇ ಪರಿಗಣಿಸಲ್ಪಟ್ಟಿರುವ “ಟೆಸ್ಟ್ ಟ್ಯೂಬ್ ” (ಪ್ರಣಾಳ ಶಿಶು) ಪಡೆಯುವ ನಿರ್ಧಾರಕ್ಕೆ ಅವರು ಬಂದು ತಮಗೆ ಪರಿಚಯವಿದ್ದ ಮುಲಗಳಲೆಲ್ಲ ಸಂಪರ್ಕಿಸುತ್ತಾರೆ. ವೈದ್ಯರಿಂದಲೂ ಅನೇಕ ಧೈರ್ಯ ತುಂಬುವ ಭರವಸೆ ಬರುತ್ತದೆ. ಆದರೆ, ಅದಕ್ಕೆ ಆಗುವ ವೆಚ್ಚ ಮಾತ್ರ ಅವರ ಸಾಮರ್ಥ್ಯಕ್ಕೆ ಮೀರಿರುತ್ತದೆ.

ನಿರಾಶರಾದ ದಂಪತಿಗಳು ಅನಾಥ ಮಗುವೊಂದನ್ನು ದತ್ತು ಪಡೆಯುವ ದೃಢ ನಿರ್ಧಾರ ತೆಗೆದುಕೊಂಡು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ….,

ಈ ಪುಟ್ಟ ಕಥೆಯನ್ನು ಮುಲವಾಗಿಟ್ಟುಕೊಂಡು ಕಿರುಚಿತ್ರ (ಶಾರ್ಟ್ ಫಿಲಂ) ನಿರ್ಮಿಸಿದ್ದಾರೆ ಬೆಳಗಾವಿ ಮೂಲದ ಚಿತ್ರ ನಿರ್ಮಾಪಕ ಗಣಪತ ಪಾಟೀಲ್ “ಗೋಪಿಕಾ ಫಿಲಂ ಪ್ರೊಡಕ್ಷನ್ “ಅಡಿ ನಿರ್ಮಿಸಿದ್ದಾರೆ.

18 ನಿಮಿಷ 30 ಸೆಕೆಂಡ್ ಅವಧಿಯ ಈ ಚಿತ್ರದಲ್ಲಿ ಸಾಧಿಕ್ ಶೈಖ್, ರೀನಾ ಕಾಂಬಳೆ, ಉನ್ನತಿ ಶರ್ಮಾ, ಹೇಮಲತಾ ಸ್ವಾಮಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಈ ಚಿತ್ರವನ್ನು ಸುಧೀರ್ ನಾಜರೆ ಎಡಿಟ್ ಮಾಡಿದ್ದು ಛಾಯಾಗ್ರಾಹಣ ಸುಹಾಸ್ ವಿಗಿರೆ, ಸಂಗೀತ ಹಾಗು ಡಬ್ಬಿಂಗ್ ಶೈಲೇಶ್ ರೆಡೇಕರ್ ಮಾಡಿದ್ದಾರೆ.

“ಟೆಸ್ಟ್ ಟ್ಯೂಬ್ ” ಗಣಪತ್ ಪಾಟೀಲ್ ಅವರ ಮೂರನೆಯ ಚಿತ್ರವಾಗಿದೆ. ಜೂಮ್ ಎಕ್ಸ್ ಸ್ಟುಡಿಯೋದಲ್ಲಿ ಫಿಲಂ ನ ಪೋಸ್ಟ್ ಪ್ರೊಡಕ್ಷನ್ ಮಾಡಲಾಗಿರುವ ಈ ಚಿತ್ರ ಯೌಟ್ಯೂಬ್ ಚಾನೆಲ್ ಹಾಗು ಜಿ ನಂಬರ್ 1 ವರ್ಲ್ಡ್ ಎಂಟರ್ಟೈನ್ಮೆಂಟ್ (G No. 1 World Entertainment) ನಲ್ಲಿ ಮಾರ್ಚ್ 19ರಂದು ಬಿಡುಗಡೆಯಾಗಲಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!