ತುಮಕೂರು : ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐದು ಜನ ಅಸುನಿಗಿದ್ದಾರೆ ಹಾಗು 32 ಜನ ಗಾಯಗೊಂಡಿದ್ದಾರೆ ಎಂದು ತುಮಕೂರು ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ.
ಅಪಘಾತದ ಕುರಿತು ಸುದ್ಧಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಸುದ್ಧಿ ಮಾಧ್ಯಮದಲ್ಲಿ ಮೊದಲು ಎಂಟು ಪ್ರಯಾಣಿಕರು ಅಸುನಿಗಿದ್ದು ಸುಮಾರು 25 ಜನ ಗಾಯಗೊಂಡಿದ್ದಾರೆ ಎಂದು ಪ್ರಸಾರವಾಗಿದೆ.
ಗಾಯಗೊಂಡವರನ್ನು ಪಾವಗಡದ ಸರಕಾರಿ ಆಸ್ಪತ್ರೆಯಿಂದ ತುಮಕೂರಿನ ಸರಕಾರಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರು ತಿಳಿಸಿದರು.