No menu items!
Tuesday, December 3, 2024

ಆಹಾರದಲ್ಲಿ ವಿಷಪ್ರಾಷಣ ಭೀತಿ, 1000 ವೈಯಕ್ತಿಕ ಸಿಬ್ಬಂದಿ ವಜಾ ಮಾಡಿದ ರಷ್ಯಾ ಅಧ್ಯಕ್ಷ

Must read

ಮಾಸ್ಕೋ; ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರಿಗೆ ತಮ್ಮ ಪ್ರಾಣದ ಹೆದರಿಕೆ ಇರುವಂತೆ ತೋರುತ್ತಿದ್ದು, ಇದೇ ಕಾರಣಕ್ಕೆ ಅವರು ಕಳೆದ ಒಂದು ತಿಂಗಳ ಅವಧಿಯಲ್ಲಿ ತಮ್ಮ ಸುಮಾರು 1,000 ರ ವೈಯುಕ್ತಿಕ ಸಿಬ್ಬಂದಿ ಬದಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

“ರಷ್ಯಾದ ಗುಪ್ತಚರ ವರದಿಗಳ ಪ್ರಕಾರ ಪುತಿನ್ ಗೆ ತನ್ನ ಹಳೆಯ ಸಿಬ್ಬಂದಿ ಆಹಾರದಲ್ಲಿ ವಿಷ ಸೇರಿಸಿ ತನ್ನನ್ನು ಸಾಯಿಸಲಿದ್ದಾರೆಂಬ ಭಯವಿದೆ,” ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.

ಒಂದು ವರದಿಯ ಪ್ರಕಾರ, ವ್ಲಾದಿಮಿರ್ ಪುತಿನ್ ಅವರಿಗೆ ತನ್ನ ಭವಿಷ್ಯದ ಕ್ರಮಗಳು ತಮ್ಮದೇ ಜನರಲ್ಲಿ ಅಶಾಂತಿಯನ್ನು ಉಂಟುಮಾಡುತ್ತದೆ ಎಂದು ತಿಳಿದಿತ್ತು. ಕೆಲವೇ ವರ್ಷಗಳ ಹಿಂದೆ ಅವರು ಕೆಲ ದೇಶಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡರು ಮತ್ತು ಹೆಚ್ಚಿನ ದೇಶಗಳೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದರು. ಆದಾಗ್ಯೂ, ಅವರು ಕೆಲವೇ ದಿನಗಳ ಹಿಂದೆ ಉಕ್ರೇನ್ ಮೇಲೆ ದಾಳಿ ಮಾಡಿದರು.

ಇದೆ ಕಾರಣಕ್ಕೆ ತಮ್ಮ ಆದ ವೈಯಕ್ತಿಕ ಸಿಬ್ಬಂದಿಯನ್ನು ವಜಾ ಮಾಡಲು ಪ್ರಾರಂಭಿಸಿದರು, ಇದರ ಪರಿಣಾಮವಾಗಿ ಅಡುಗೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಖಾಸಗಿ ಕಾರ್ಯದರ್ಶಿಗಳು ಹೀಗೆ ಸುಮಾರು 1000 ವೈಯಕ್ತಿಕ ಸಿಬ್ಬಂದಿ ಕೆಲಸ ಕಳೆದುಕೊಂಡರು.

ಪುತಿನ್ ಅವರು ತಮ್ಮ ಆಹಾರವನ್ನು ತಿನ್ನುವ ಮೊದಲು ಯಾವಾಗಲೂ ರುಚಿ ನೋಡುವ ವೈಯಕ್ತಿಕ ಸಿಬ್ಬಂದಿಯನ್ನು ಹೊಂದಿದ್ದಾರೆಂದು ಹೇಳಲಾಗುತ್ತದೆ. ರಷ್ಯಾ ಉಕ್ರೇನ್ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿದೆ. ಪುತಿನ್ ಒಳಗೊಳಗೆ ತಮ್ಮ ಸಿಬ್ಬಂದಿಯಿಂದಲೇ ಜೀವಭಯದಲ್ಲಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!