ಹುಬ್ಬಳ್ಳಿ :ಪ್ರತಿದಿನ ಪೊಲೀಸ್ ಜೀಪ್ ಕ್ಲೀನ್ ಮಾಡುತ್ತಿದ್ದ ವ್ಯಕ್ತಿಯೋರ್ವ ಪೊಲೀಸ್ ವಾಹನವನ್ನೇ ಕಳ್ಳತನ ಮಾಡಿ, ಸಿಕ್ಕಿಬಿದ್ದಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಬುಧುವಾರ ನಡೆದಿದೆ.
ನಾಗಪ್ಪ ಹಡಪದ ಪೊಲೀಸ್ ಜೀಪ್ ಕದ್ದ ಆರೋಪಿ. ಪ್ರತಿದಿನ ಪೊಲೀಸ್ ವಾಹನವನ್ನು ಕ್ಲೀನ್ ಮಾಡಲು ಠಾಣೆಗೆ ಬರುತ್ತಿದ್ದ ನಾಗಪ್ಪ, ಠಾಣೆಯಿಂದಲೇ ಜೀಪ್ ಕದ್ದುಕೊಂಡು ಬ್ಯಾಡಗಿ ಪರಾರಿಯಾಗಿದ್ದ.
ಕೂಡಲೇ ಬೆನ್ನಟ್ಟಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆಯಲ್ಲಿ
ನಾಗಪ್ಪ, ಪೊಲೀಸ್ ವಾಹನವನ್ನ ಚಲಾಯಿಸುವುದು ತನಗೆ ಅಚ್ಚುಮೆಚ್ಚು. ಅಷ್ಟೇ ಅಲ್ಲ, ಅದನ್ನ ಕದ್ದೆ ಚಲಾಯಿಸಬೇಕೆಂಬ ಕನಸು ಕಂಡಿದ್ದನಂತೆ. ಅದಕ್ಕಾಗಿ ಹಲವು ತಿಂಗಳುಗಳಿಂದ ಹೊಂಚು ಹಾಕಿದ್ದನಂತೆ. ಹೀಗಾಗಿ, ಪೊಲೀಸ್ ಠಾಣೆಯ ಸಿಬ್ಬಂದಿ ವಿಶ್ವಾಸ ಗಳಿಸಿಕೊಂಡಿದ್ದ. ಕಳ್ಳತನ ಮಾಡುವ ಸಮಯದಲ್ಲಿ ಪಿಎಸ್‌ಐ ರಜೆಯಲ್ಲಿರುವುದನ್ನ ಖಾತ್ರಿ ಪಡಿಸಿಕೊಂಡು ಜೀಪ್ ಕಳ್ಳತನ ಮಾಡಿದ್ದಾನಂತೆ.