ಅಭುದಾಬಿ: ಅಬುಧಾಬಿಯಲ್ಲಿ ನೆಲೆಸಿರುವ ಭಾರತೀಯ ವಲಸಿಗ ಕೇರಳದ ಮಹಿಳೆ ಲೀನಾ ಜಲಾಲ್ “ಬಿಗ್ ಟಿಕೆಟ್” ಲಾಟರಿ ಡ್ರಾದಲ್ಲಿ 44.75 ಕೋಟಿ ರೂಪಾಯಿ ಗೆದ್ದಿದ್ದಾರೆ. ಕೇರಳದ ತ್ರಿಶೂರ್‌ನವರಾದ ಲೀನಾ 22 ಮಿಲಿಯನ್ ದಿರ್ಹಂ ಅಂದರೆ ಭಾರತೀಯ ಲೆಕ್ಕದಲ್ಲಿ 44.75 ಕೋಟಿ ರೂಪಾಯಿಗಳನ್ನು ಗೆದ್ದಿದ್ದಾರೆ.
ಫೆಬ್ರವರಿ 3ರಂದು ನಡೆದ ಡ್ರಾದಲ್ಲಿ, ಲೀನಾ ಅವರ ಲಾಟರಿ ಟಿಕೆಟ್ ಸಂಖ್ಯೆ -144387- ಅನ್ನು ‘ಟೆರಿಫಿಕ್ 22 ಮಿಲಿಯನ್ ಸರಣಿ 236’ರಲ್ಲಿ ಆಯ್ಕೆ ಮಾಡಲಾಗಿದೆ.
ಗಲ್ಫ್ ನ್ಯೂಸ್‌ನ ಪತ್ರಿಕೆ ವರದಿಯ ಪ್ರಕಾರ, ಲೀನಾ ಅಬುಧಾಬಿಯಲ್ಲಿ ಕೆಲಸ ಮಾಡುವ ಮಾನವ ಸಂಪನ್ಮೂಲ ವೃತ್ತಿಪರರಾಗಿದ್ದಾರೆ. “ಟಿಕೆಟ್ ಅನ್ನು ಇತರ ಹತ್ತು ಜನರೊಂದಿಗೆ ಹಂಚಿಕೊಳ್ಳುತ್ತೇನೆ ಮತ್ತು ಬಹುಮಾನದ ಸ್ವಲ್ಪ ಮೊತ್ತವನ್ನು ದಾನ ಮಾಡಲು ಯೋಜಿಸುತ್ತೇನೆ,” ಎಂದು ಅವರು ತಿಳಿಸಿದ್ದಾರೆ.
ಲೀನಾ, ಲಾಟರಿ ಅದೃಷ್ಟವನ್ನು ಪಡೆದ ಏಕೈಕ ಭಾರತೀಯರಲ್ಲ. ಕೇರಳದ ಮತ್ತೊಬ್ಬ ವಲಸಿಗರಾದ ಸುರೈಫ್ ಸುರು ಅವರು ಸರಣಿ 236 ರಲ್ಲಿ ಟಿಕೆಟ್ ಆಯ್ಕೆಯಾದ ನಂತರ 1 ಮಿಲಿಯನ್ ದಿರ್ಹಂ
ಗೆದ್ದರು. ಕೇರಳದ ಮಲ್ಲಪುರಂ ಜಿಲ್ಲೆಯಾವರಾದ ಸುರು ಅವರು ” ನನಗೆ ಬಂದ ಬಹುಮಾನದ ಹಣವನ್ನು ಇತರ 29 ಜನರೊಂದಿಗೆ ಹಂಚಿಕೊಳ್ಳುತ್ತೇನೆ ಮತ್ತು ಉಳಿದ ಭಾಗವನ್ನು ನನ್ನ ಕೆಲವು ಬಡ ಸ್ನೇಹಿತರಿಗೆ ಸಹಾಯ ಮಾಡಲು ಬಳಸುತ್ತೇನೆ, ” ಎಂದು ಹೇಳಿದ್ದಾರೆ.
“ನನ್ನ ತಂದೆ ತಾಯಿಗೆ ಸ್ವಲ್ಪ ಹಣ ಕೊಡುತ್ತೇನೆ. ನಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ನನ್ನ ಹೆಂಡತಿ ಮತ್ತು ಮಗಳಿಗೆ ಉಳಿದ ಹಣವನ್ನು ಉಳಿಸಲು ನಾನು ಬಯಸುತ್ತೇನೆ, ”ಎಂದು ಸುರು ತಿಳಿಸಿದ್ದಾರೆ.
ಕಳೆದ ವರ್ಷ, ದುಬೈನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕೇರಳದ ವ್ಯಕ್ತಿಯೊಬ್ಬರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆದ ರಾಫೆಲ್ ಡ್ರಾದಲ್ಲಿ 20 ಮಿಲಿಯನ್ ದಿರ್ಹಮ್‌ಗಳನ್ನು (ಅಂದಾಜು 40 ಕೋಟಿ ರೂ.) ಗೆಲ್ಲುವ ಮೂಲಕ ಜಾಕ್‌ಪಾಟ್ ಹೊಡೆದಿದ್ದರು.