ಬೆಳಗಾವಿ : ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕಾಲೇಜು ಆವರಣದಲ್ಲಿ ಧಾರ್ಮಿಕ ಘೋಷಣೆ ಕೂಗಿದ ಆರು ಜನರನ್ನು ವಶಕ್ಕೆ ಪಡೆಯಲಾಗಿದೆಯೆಂದು ಪೊಲೀಸ್ ಆಯುಕ್ತ ಎಂ ಬಿ ಬೋರಲಿಂಗಯ್ಯ ತಿಳಿಸಿದ್ದಾರೆ.
ಸದಾಶಿವನಗರದಲ್ಲಿರುವ – ವಿಜಯಾ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ಸ್ – ಗೆ ಭೆಟ್ಟಿ ನೀಡಿದ್ದ ಕಮಿಷನರ್ ಬೋರಲಿಂಗಯ್ಯ ಹಿಜಾಬ್ ದೊಂದಿಗೆ ತರಗತಿ ಪ್ರವೇಶಿಸಲು ನಿರಾಕರಿಸಲ್ಪಟ್ಟ ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲಿರುವದನ್ನು ಅರಿತ ಅವರ ಮನೆಯವರು, ಪರಿಚಯಸ್ತರು ಆಗಮಿಸಿ, ಕಾಲೇಜು ಆಡಳಿತ ಮಂಡಳಿಯೊಂದಿಗೆ ವಾದಿಸಿದ್ದಾರೆ.
ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ಆಸ್ಪದವಿಲ್ಲವೆಂದು ಅರಿತಾಗ ಅವರು ಧಾರ್ಮಿಕ ಘೋಷಣೆ ಕೂಗಿದ್ದಾರೆ. “ಪರಸ್ಥಿತಿ ವಿಕೋಪಕ್ಕೆ ಹೋಗಬಾರದೆಂದು ಆರು ಜನರನ್ನು ವಶಕ್ಕೆ ಪಡೆಯಲಾಗಿದೆ,” ಎಂದು ಕಮಿಷನರ್ ಬೋರಲಿಂಗಯ್ಯ ತಿಳಿಸಿದರು. ಅವರು ಧಾರ್ಮಿಕ ಘೋಷಣೆ ಕೂಗಿದ್ದಾರೋ, ಇಲ್ಲವೋ ಪರಿಶೀಲಿಸಲಾಗುತ್ತಿದೆ, ” ಎಂದು ತಿಳಿಸಿದರು.