ತುಮಕೂರು: “ಕೆಲಸಕ್ಕಿಂತ ಧರ್ಮ ಶ್ರೇಷ್ಠ, ದೊಡ್ಡದು,” ಎಂದು ನಂಬಿರುವ ಮಹಿಳೆಯೊಬ್ಬರು ಹಿಜಾಬ್ ಪರವಾಗಿ ತಮ್ಮ ಕಾಲೇಜು ಉಪನ್ಯಾಸಕಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಚಾಂದಿನಿ ಎಂಬವರು ತಮ್ಮ ಅತಿಥಿ ಉಪನ್ಯಾಸಕಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ತುಮಕೂರಿನ ತಿಪಟೂರು ಮೂಲದ ಚಾಂದಿನಿ ಅವರು ಜೈನ್ ಪಿಯು ಕಾಲೇಜು, ವಿದ್ಯಾವಾಹಿನಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಹಿಜಾಬ್ ವಿವಾದ ಉಂಟಾದ ನಂತರ ಕಾಲೇಜು ಆಡಳಿತ ಮಂಡಳಿ ಅವರಿಗೆ ಹಿಜಾಬ್ ಧರಿಸಿ ಕಾಲೇಜಿಗೆ ಬರದಂತೆ ಸೂಚನೆ ನೀಡಿತ್ತು ಎನ್ನಲಾಗಿದೆ. ಪ್ರತಿ ನಿತ್ಯ ಹಿಜಾಬ್ ಧರಿಸಿ ಕಾಲೇಜಿಗೆ ಹಾಜರಾಗುತ್ತಿದ್ದ ಚಾಂದಿನಿ ಅವರು ಸದ್ಯ ಹಿಜಾಬ್ ವಿವಾದ ಉಂಟಾದ ಪರಿಣಾಮ ಜೈನ್ ಕಾಲೇಜಿನ ಅತಿಥಿ ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇಂಗ್ಲಿಷ್ ಭಾಷೆಯ ವಿಚಾರ ಬೋಧನೆ ಮಾಡುತ್ತಿದ್ದ ಅವರು ಕೆಲಸಕ್ಕಿಂತ ಧರ್ಮ ಮುಖ್ಯ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.