No menu items!
Sunday, December 22, 2024

ಕರ್ನಾಟಕ ಶಾಸನ ರಚನಕಾರರ ಸಂಬಳ ಹೆಚ್ಚಳ, ತಿಂಗಳಿಗೆ ₹250 ಪಾವತಿಸಿದರೆ ಫ್ರೀ ಕಾಲ್ ಇರುವಾಗ ಇವರಿಗೆ ₹ 20,000 ದೂರವಾಣಿ ಶುಲ್ಕ

Must read

ಬೆಂಗಳೂರು: ಬೆಂಗಳೂರು: ವಿಧಾನಸಭೆ ಸರಿಯಾಗಿ ನಡೆಯಲಿಲ್ಲ. ಆದರೆ ಕಳೆದ ಐದು ದಿನಗಳಿಂದ ಗದ್ದಲದಲ್ಲೇ ವ್ಯರ್ಥವಾಗುತ್ತಿರುವ ಸದನದಲ್ಲಿ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರ ಸಂಬಳ ಹಾಗೂ ಭತ್ಯೆಯನ್ನು ಹೆಚ್ಚಳ ಮಾಡಿಕೊಳ್ಳಲಾಗಿದೆ.

ನಿವೃತ್ತಿ ವೇತನ ತಿದ್ದುಪಡಿ ವಿಧೇಯಕವೂ ಅಂಗೀಕಾರವಾಗಿದೆ
ಈ ನಡುವೆಯೂ ಇಂದು, ಮಂಗಳವಾರ ಮುಖ್ಯಮಂತ್ರಿ, ಮಂತ್ರಿಗಳು, ಸಭಾಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಶಾಸಕರು, ಪರಿಷತ್ ಸದಸ್ಯರ ವೇತನ ಹೆಚ್ಚಳ ವಿಧೇಯಕ ವಿಧಾನಸಭೆ, ವಿಧಾನಪರಿಷತ್ ನಲ್ಲಿ ಅಂಗೀಕರಿಸಲ್ಪಟ್ಟಿದೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಧರಣಿ ಮಧ್ಯೆಯೇ ಎರಡು ವಿಧೇಯಕಗಳು ಮಂಡನೆಯಾಗಿ ಅಂಗೀಕಾರಗೊಂಡವು ವಿಧೇಯಕ ಅಂಗೀಕಾರವಾಗಿದ್ದರಿಂದ ಮುಖ್ಯಮಂತ್ರಿ, ಮಂತ್ರಿಗಳು, ಸಭಾಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಶಾಸಕರು, ಪರಿಷತ್ ಸದಸ್ಯರ ಸಂಬಳ-ಭತ್ಯೆ 50%ರಷ್ಟು ಹೆಚ್ಚಳ ಆಗಿದೆ.
ವೇತನ ಹೆಚ್ಚಳದ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲು ಸಚಿವ ಮಾಧುಸ್ವಾಮಿ ಬಿಲ್ ಬಗ್ಗೆ ಸಮರ್ಥನೆ ಮಾಡಿಕೊಂಡರು. ಕೋವಿಡ್ ಸಂದರ್ಭದಲ್ಲಿ ಬಹಳ ಕಷ್ಟ ಆಗಿದೆ. ಡಿಸೇಲ್, ಪೆಟ್ರೋಲ್ ಕೂಡ ಜಾಸ್ತಿ ಆಗಿದೆ. ಮನೆ ಬಾಡಿಗೆ ಕೂಡ ಜಾಸ್ತಿ ಆಗಿದೆ. ಹಾಗಾಗಿ ಮುಖ್ಯಮಂತ್ರಿ, ಸಚಿವರು, ಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಶಾಸಕರ ಸಂಬಳ ಹೆಚ್ಚಳ ಮಾಡಲು ಬಿಲ್ ತಂದಿದ್ದೇವೆ. 50%ರಷ್ಟು ಹೆಚ್ಚಳಕ್ಕೆ ಬಿಲ್ ತಂದಿದ್ದೇವೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳು

ಮುಖ್ಯಮಂತ್ರಿಗಳಿಗೆ ಪ್ರತಿ ತಿಂಗಳು  ದ 50 ಸಾವಿರ ಇದ್ದಿದ್ದನ್ನು 75 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.
ಕ್ಯಾಬಿನೆಟ್ ದರ್ಜೆ ಮಂತ್ರಿಗಳಿಗೆ ಪ್ರತಿ ತಿಂಗಳಿಗೆ 40 ಸಾವಿರ ಇದ್ದ ಸಂಬಳ 60 ಸಾವಿರ ರೂ.ಗಳಿಗೆ ಹೆಚ್ಚಳ.
ಕ್ಯಾಬಿನೆಟ್ ದರ್ಜೆ ಸಚಿವರಿಗೆ ಪ್ರತಿ ವರ್ಷಕ್ಕೆ ಅತಿಥ್ಯ ಭತ್ಯೆ  3 ಲಕ್ಷದಿಂದ ನಾಲ್ಕೂವರೆ ಲಕ್ಷ ರೂ,ಗಳಿಗೆ ಹೆಚ್ಚಳ ಮಾಡಲಾಗಿದೆ.
ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಮನೆ ಬಾಡಿಗೆ   80 ಸಾವಿರದಿಂದ 1.20  ಲಕ್ಷ ರೂ.ಗಳಿಗೆ ಹೆಚ್ಚಳವಾಗಿದೆ,  ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಮನೆ ನಿರ್ವಹಣೆ ವೆಚ್ಚ  20 ಸಾವಿರದಿಂದ 30 ಸಾವಿರ ರೂ.ಗಳಿಗೆ ಹೆಚ್ಚಳವಾಗಿದೆ. ಕ್ಯಾಬಿನೆಟ್ ದರ್ಜೆ ಮಂತ್ರಿಗಳ ವಾಹನ ಸೌಲಭ್ಯಕ್ಕಾಗಿ ಪ್ರತಿ ತಿಂಗಳಿಗೆ ಒಂದು ಸಾವಿರ ಪೆಟ್ರೋಲ್​ನಿಂದ 2 ಸಾವಿರ ಪೆಟ್ರೋಲ್​ಗೆ ಹೆಚ್ಚಳ ಮಾಡಲಾಗಿದೆ.

ಸಭಾಧ್ಯಕ್ಷರು ಹಾಗೂ ಉಪಸಭಾಧ್ಯಕ್ಷರು

ಸಂಬಳ: 50,000 ರೂ.ಗಳಿಂದ 75,000 ರೂ. ಗೆ ಹೆಚ್ಚಳ
ಆತಿಥ್ಯ ವೇತನ ವಾರ್ಷಿಕ: ₹3,00,000 ದಿಂದ ₹ 4,00,000
ಮನೆ ಬಾಡಿಗೆ: ₹80,000 ರಿಂದ ₹1,60,000
ಇಂಧನ: 1000 ಲೀಟರ್ ರಿಂದ 2000 ಲೀಟರ್
ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ ₹30 ರಿಂದ ₹40
ದಿನ ಬತ್ತೆ(ಪ್ರಯಾಣ): ದಿನಕ್ಕೆ ₹2000 ದಿಂದ ₹3000
ಹೊರ ರಾಜ್ಯ ಪ್ರವಾಸ: ದಿನಕ್ಕೆ ₹2500 +₹5000 ದಿಂದ ₹3000+₹7000

ವಿಪಕ್ಷ ನಾಯಕ

ಸಂಬಳ: ₹40,000 ದಿಂದ ₹ 60,000 ಗೆ ಹೆಚ್ಚಳ
ಆತಿಥ್ಯ ವೇತನ ವಾರ್ಷಿಕ: ₹2,00,000 ದಿಂದ ₹ 2,50,000
ಇಂಧನ: 1000 ಲೀಟರ್ ರಿಂದ 2000 ಲೀಟರ್
ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ ₹30
ದಿನ ಬತ್ತೆ(ಪ್ರಯಾಣ): ದಿನಕ್ಕೆ ₹2000 ದಿಂದ ₹3000
ಹೊರ ರಾಜ್ಯ ಪ್ರವಾಸ: ₹5000 ದಿಂದ ₹7000

ಶಾಸಕರು

ಸಂಬಳ: ₹20,000 ದಿಂದ ₹ 40,000 ಗೆ ಹೆಚ್ಚಳ
ಕ್ಷೇತ್ರದ ಭತ್ಯೆ: ₹40,000 ರಿಂದ ₹60000
ಆತಿಥ್ಯ ವೇತನ (ವಾರ್ಷಿಕ): ₹2,00,000 ದಿಂದ ₹ 2,50,000
ಇಂಧನ: 1000 ಲೀಟರ್ ರಿಂದ 2000 ಲೀಟರ್
ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ ₹25 ರಿಂದ ₹30
ದಿನ ಭತ್ಯೆ(ಪ್ರಯಾಣ): ದಿನಕ್ಕೆ ₹2000 ದಿಂದ ₹2500
ಹೊರ ರಾಜ್ಯ ಪ್ರವಾಸ: ₹5000 ದಿಂದ ₹7000

ದೂರವಾಣಿ ಬಿಲ್

ದೂರವಾಣಿ ವೆಚ್ಚ ಯತಾಸ್ಥಿತಿ ತಿಂಗಳಿಗೆ 20,000 ರೂ. ಕಾಯ್ದಿರಿಸಲಾಗಿದೆ. ಆಪ್ತಸಹಾಯಕನಿಗೆ ಮತ್ತು ರೂಮ್ ಬಾಯ್ ಸೇರಿ ತಿಂಗಳಿಗೆ 10,000 ರೂ. ದಿಂದ 20,000 ರೂ. ಗಳಿಗೆ ಹೆಚ್ಚಳ ಮಾಡಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!