ಬೆಳಗಾವಿ : ಮದ್ಯಕ್ಕೆ ದಾಸರಾಗಿದ್ದ ಪತಿಯ ಕುಡಿತ ಬಿಡಿಸಲು ಔಷದಿಗಾಗಿ ಪ್ರಯತ್ನಿಸುತ್ತಿದ್ದ ಮಹಿಳೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪದ ಹಿನ್ನಲೆಯಲ್ಲಿ ನ್ಯಾಯವಾದಿಯೊಬ್ಬರನ್ನು ಚಿಕ್ಕೋಡಿಯ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಕಬ್ಬೂರಿನ ನಿವಾಸಿಯಾಗಿರುವ ಚಿಕ್ಕೋಡಿ ನ್ಯಾಯಾಲಯಗಳಲ್ಲಿ ವೃತಿಯಲ್ಲಿರುವ, ವಕೀಲರೊಬ್ಬರು ಈ ಮಹಿಳೆಯನ್ನು ಸಂಧಿಸಿ, ನಿನ್ನೆ ಮಂಗಳವಾರ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಂಧರ್ಭದಲ್ಲಿ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಮಹಿಳೆ ಕೂಗಿ ಕೊಂಡದ್ದರಿಂದ ನೆರೆಹೊರೆಯವರು ಬಂದು ಮಹಿಳೆಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದು ವಕೀಲರನ್ನು ಹಿಡಿದು ಕಬ್ಬುರು ಉಪ ಪೊಲೀಸ ಠಾಣೆಗೆ ಒಪ್ಪಿಸಿದ್ದರು. ನಂತರ ಅವರನ್ನು ಚಿಕ್ಕೋಡಿ ಪೊಲೀಸರಿಗೆ ಒಪ್ಪಿಸಲಾಗಿದೆ. ವಶಕ್ಕೆ ಪಡೆದ ನ್ಯಾಯವಾದಿಯನ್ನು ಸಂಜಯ ವಡ್ಡರಗಾವಿ ಎಂದು ಗುರುತಿಸಲಾಗಿದೆ.