No menu items!
Wednesday, January 15, 2025

ನಿಪ್ಪಾಣಿ ಹೋಟೆಲ್ ನಲ್ಲಿ ವೈಶ್ಯಾ, ವಿದೇಶಿ ಮಹಿಳೆ ಸೇರಿ ಎಂಟು ಜನರ ಬಂಧನ

Must read

ನಿಪ್ಪಾಣಿ : ನಿಪ್ಪಾಣಿ ನಗರದ ಹೊರವಲಯದ ಹೊಟೇಲ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವರ ಮೇಲೆ ಶನಿವಾರ ತಡರಾತ್ರಿ ನಿಪ್ಪಾಣಿ ನಗರ ಪೊಲೀಸರು ದಾಳಿ ನಡೆಸಿ ಎಂಟು ಜನರ ವಿರುದ್ಧಕ್ರಮ ಕೈಗೊಂಡಿದೆ.

ಇದರಲ್ಲಿ ವಿದೇಶಿ ಮಹಿಳೆಯೂ ಸೇರಿದ್ದಾರೆ. ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ,ಸಿಪಿಐ ಶಿವಯೋಗಿ, ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕೃಷ್ಣವೇಣಿ ಗುರ್ಲಹೊಸೂರು ಹಾಗೂ ಸಿಬ್ಬಂದಿಗಳು ದಾಳಿಯನ್ನು ನಡೆಸಿ ಸಂಜಯ ಭೈರಪ್ಪ ಮಾಳಿ (35, ಸಂಕೇಶ್ವರ ನಿವಾಸಿ), ಅರುಣ್ ಜೈಪಾಲ ಶೇಕಣ್ಣವರ್ (34, ಹುಕ್ಕೇರಿ ನಿವಾಸಿ ) ಖಂಡೋಬಾ ಚವ್ಹಾಣ (35), ಪಿಂಪಲ್ ನಿವಾಸಿ) ಈ ಮೂವರನ್ನು ಹಾಗೂ ಐವರು ಮಹಿಳೆಯರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಸಿಪಿಐ ಶಿವಯೋಗಿಯವರು ತಿಳಿಸಿದ್ದಾರೆ.

ಸಂಜಯ, ಅರುಣ ಮತ್ತು ಪ್ರಶಾಂತ ಎಂಬುವವರನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!