ಬೆಳಗಾವಿ : ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ನಾಳೆ ಸೋಮವಾರ ಮುಂಜಾನೆ 10.30ಕ್ಕೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗಾವಿ ಜಿಲ್ಲೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಐದು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಐದು ಕಾಮಗಾರಿಗಳ ಅಂದಾಜು ವೆಚ್ಚ 3972 ಕೋಟಿ ರೂಪಾಯಿ. ಒಟ್ಟು 238 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ.
- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಆರು ಪಥಗಳ ಬೆಳಗಾವಿ-ಸಂಕೇಶ್ವರ 40 ಕಿ.ಮೀ. ಬೈಪಾಸ್ ರಸ್ತೆ,
- ಸಂಕೇಶ್ವರದಿಂದ ಮಹಾರಾಷ್ಟ್ರ ಗಡಿಯವರೆಗೆ 37.83 ಕಿ.ಮೀ.ವರೆಗೆ ಬೈಪಾಸ್ ರಸ್ತೆ 3014 ಕೋಟಿ ರೂಪಾಯಿ ವೆಚ್ಛದಲ್ಲಿ ಒಟ್ಟು 147 ಕಿ.ಮೀ.
- 246.77 ಕೋಟಿ ವೆಚ್ಛದಲ್ಲಿ 69 ಕಿ.ಮೀ. ಸಂಕ್ಲೀನ್-ಜಾಂಬೋಟಿ ಬೆಳಗಾವಿ ಎರಡು ಪಥದ ರಸ್ತೆ ಕಾಮಗಾರಿ, ಹಾಗೂ
- ಪಿಡಬ್ಲುಡಿ ಇಲಾಖೆಯಿಂದ 246.78 ಕೋಟಿ ವೆಚ್ಛದಲ್ಲಿ 80 ಕಿ.ಮೀ ವಿಜಯಪುರ-ಮುರಗುಂಡಿ ರಸ್ತೆ, 90.30 ಕೋಟಿ ವೆಚ್ಛದಲ್ಲಿ 11.62 ಕಿ.ಮೀ. ಹಾಗೂ
- ಸಿದ್ದಾಪುರ-ವಿಜಯಪುರ ರಸ್ತೆ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ ಎಂದರು.
ಸಚಿವ ಗಡ್ಕರಿ ಅವರ ಜೊತೆಗ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಸೇರಿ ಹಲವು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದ ಸಂಸದೆ ಮಂಗಲ್ ಅಂಗಡಿ ರಿಂಗ್ ರೋಡ್ ಬಗ್ಗೆ ಡಿಪಿಆರ್ ಆಗಿದೆ. ನಿತಿನ್ ಗಡ್ಕರಿ ಅವರು ಇಲ್ಲಿಗೆ ಬಂದಾಗ ಈ ಬಗ್ಗೆ ಮಾತನಾಡುತ್ತೇವೆ. ಅದೇ ರೀತಿ ರಾಯಚೂರು ಬಾಚಿ ರಸ್ತೆ ಪ್ರಕ್ರಿಯೆ ನಡೆದಿದೆ.