No menu items!
Tuesday, December 3, 2024

ಸೇವಾ ನಿವೃತ್ತಿ ಹೊಂದಿದ ಜಿಲ್ಲೆಯ ಕಾರ್ಗಿಲ್ ಯೋಧನಿಗೆ ಅಧುರಿ ಸ್ವಾಗತ ನೀಡಿದ janate

Must read

ಬೆಳಗಾವಿ : ಕಾರ್ಗಿಲ್ ಯುದ್ಧದಲ್ಲಿ ಮೂವರು ಉಗ್ರವಾದಿಗಳನ್ನು ಹತ್ಯೆ ಮಾಡಿ ಅಪ್ರತಿಮ ಶೌರ್ಯ ಮೆರೆದಿದ್ದ ಬೆಳಗಾವಿ ಜಿಲ್ಲೆಯ ಯೋಧ, ಬಸಪ್ಪ ರಾಚಪ್ಪ ಮುಗಳಿಹಾಳ ಸೇವೆಯಿಂದ ನಿವೃತ್ತಿಗೊಂಡು ಮೊದಲನೇ ಸಲ ತವರು ಜಿಲ್ಲೆಗೆ ಬುಧುವಾರ ಆಗಮಿಸಿದ್ದು, ಅವರನ್ನು ಅದ್ಧುರಿಯಾಗಿ ಸ್ವಾಗತಿಸಲಾಯಿತು.

ರೈಲ್ವೆ ನಿಲ್ದಾಣದಿಂದ ತೆರೆದ ಜೀಪ್ ನಲ್ಲಿ ಮೆರವಣಿಗೆಯಲ್ಲಿ ರಾಣಿ ಚನ್ನಮ್ಮ ಸರ್ಕಲ್ ಗೆ ತಲುಪಿದ ಅವರು ಚನ್ನಮ್ಮ ಪ್ರತಿಮೆಗೆ ಹೂವಿನ ಹಾರ ಹಾಕಿ ಗೌರವಿಸಿದರು. ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಕಾರ್ಗಿಲ್ ಯುದ್ಧದಲ್ಲಿ ತಾವು ಪಾಕಿಸ್ತಾನದ ಮೂವರು ಉಗ್ರವಾಧಿಗಳನ್ನು ಹತ್ಯೆ ಮಾಡಿರುವದಾಗಿಯೂ ಮೂರನೇಯ ಉಗ್ರನನ್ನು ಅವನದೇ ಬಂದೂಕಿನಿಂದ ಹತ್ಯೆ ಮಾಡಿರುವದಾಗಿರೂ ತಿಳಿಸಿ, ಆ ಶೌರ್ಯಕ್ಕಾಗಿ ತಮಗೆ ” ಶೌರ್ಯ ಚಕ್ರ” ಪ್ರಶಸ್ತಿ ದೊರೆತ್ತಿದೆ ಎಂದರು. ಆಗಿನ ರಾಷ್ಟ್ರಪತಿ ಕೆಆರ್ ನಾರಾಯಣನ್ ಮುಗಳಿಹಾಳ್ ಅವರನ್ನು ಪ್ರಶಸ್ತಿ ನೀಡಿ ಗೌರವಿಸಿದರು.

28 ವರುಷ ಸೇನೆಯಲ್ಲಿದ್ದ ಅವರು ಜಾಮ್ ನಗರ, ಅಸ್ಸಾಂ, ಬಿಕನಾರ್, ಉತ್ತರಾಖಂಡ, ಕಾರ್ಗಿಲ್ ಸೇರಿದಂತೆ ಬೆಳಗಾವಿಯಲ್ಲೂ 6 ವರುಷ ಸೇವೆ ಸಲ್ಲಿಸಿದ್ದಾರೆ. ಬಸಪ್ಪ ಮುಗಳಿಹಾಳ್ ರಾಮದುರ್ಗ ತಾಲೂಕಿನ ಚೀಕೊಪ್ಪ ಗ್ರಾಮದವರು.

ಕಾರ್ಗಿಲ್ ಯುದ್ಧದಲ್ಲಿ ತಮ್ಮ ಕೆಲವು ಸಹಪಾಠಿಗಳನ್ನು ಕಳೆದುಕೊಂಡಿರುವದಾಗಿ ತಿಳಿಸಿದ ಅವರು, ಯುದ್ಧ ಇನ್ನಷ್ಟು ದಿನ ಮುಂದುವರೆದಿದ್ದರೆ, ಸಂಪೂರ್ಣ ವೈರಿ ಪಡೆಯನ್ನೇ ನಿರ್ಮೂಲ ಮಾಡುತ್ತಿದುದ್ದಾಗಿ ತಿಳಿಸಿದರು.

ರಾಣಿ ಚನ್ನಮ್ಮ ವೃತದಲ್ಲಿ ಬಿಜೆಪಿ ಮಾಜಿ ಸಚಿವ ಶಶಿಕಾಂತ್ ನಾಯಕ್, ಬೆಳಗಾವಿ ಸಂಸದರಾದ ಮಂಗಳಾ ಅಂಗಡಿ, ಸೇರಿದಂತೆ ಕೆಲವರು ಮುಗಳಿಹಾಳ್ ಅವರನ್ನು ಸ್ವಾಗತಿಸಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!