ಧಾರವಾಡ : ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಅವರ ವಿರುದ್ಧ FIR ದಾಖಲು ಮಾಡಿದ್ದ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ.
ಈ ವಿಷಯ ವಿಧಾನ ಪರಿಷತ್ ನಲ್ಲೂ ಚರ್ಚಿಸಿ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿತ್ತು.
ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಮ್ಮ ಮೇಲೆ ಹಲ್ಲೆ ಮಾಡಿದ್ದು, ತಮ್ಮ ಕಾರ್ ಕೂಡ ಡ್ಯಾಮೇಜ್ ಮಾಡಿದ್ದರೆಂದು ಆರೋಪಿಸಿ ಅವರ ವಿರುದ್ಧ ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ವಾಲ್ಮೀಕಿ ಮಹಾಸಭಾ ಧಾರವಾಡ ಜಿಲ್ಲಾ ಅಧ್ಯಕ್ಷ ಮೋಹನ್ ಗುಡಿಸಲಮನಿ ದೂರು ಸಲ್ಲಿಸಿದ್ದು, FIR ಕೂಡ ದಾಖಲಾಗಿದೆ.
ಮಹಾಸಭಾ ನಡೆಸುವ ಸರ್ವೋದಯ ಶಿಕ್ಷಣ ಸಂಸ್ಥೆಯ ಭಾಗವಾಗಿರುವ ಹೊರಟ್ಟಿ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆಂದು ಗುಡಿಸಲಮನಿ ಆರೋಪಿಸುತ್ತಿದ್ದರು. ಈ ಕುರಿತು ಹೊರಟ್ಟಿ ಅವರಿಗೆ ಗುಡಿಸಲಮನಿ ಮೇಲೆ ದ್ವೇಷವಿತ್ತು ಎನ್ನಲಾಗಿದೆ.
ಇತ್ತೀಚಿಗೆ ತಾವು ಮುಗದ ಗ್ರಾಮದಲ್ಲಿರುವ ಮಹಾಸಭೆಯ ಶಾಲೆಗೆ ಭೆಟ್ಟಿ ನೀಡಿದ್ದಾಗ ಅಲ್ಲಿಗೆ ಆಗಮಿಸಿ ಹೊರಟ್ಟಿ ತಮ್ಮ ಮೇಲೆ ಹಲ್ಲೆ ಮಾಡಿದ್ದಲದೇ ತಮ್ಮ ಕಾರ್ ಕೂಡ ಡ್ಯಾಮೇಜ್ ಮಾಡಿದ್ದರೆಂದು ಗುಡಿಸಲಾಮನಿ ದೂರಿನಲ್ಲಿ ಆರೋಪಿಸಿದ್ದಾರೆ.