ಧಾರವಾಡ : ಮದ್ಯಪಾನಮಾಡಿ ಪ್ರತಿದಿನ ದೈಹಿಕ ಹಿಂಸೆ ನೀಡುತಿದ್ದ ಪತಿಯನ್ನು ಪತ್ನಿ ಹೊಡೆದು ಕೊಂದ ಘಟನೆ ಧಾರವಾಡ ಜಿಲ್ಲೆಯ ಮರೆವಾಡ್ ಎಂಬಲ್ಲಿ ಸಂಭವಿಸಿದೆ.
ಈರಣ್ಣ ಅಮರಗೋಳ ಕೊಲೆಯಾದ ವ್ಯಕ್ತಿ. ಮದ್ಯಕ್ಕೆ ದಾಸರಾಗಿದ್ದ ಅವರು ಪ್ರತಿದಿನ ಮದ್ಯಪಾನಮಾಡಿ ಪತ್ನಿ ಶೋಭಾ ಅವರೊಂದಿಗೆ ಜಗಳವಾಡಿ, ಕೆಲವೊಮ್ಮೆ ಹೊಡೆಯುತ್ತಿದ್ದರು. ನಿನ್ನೆ ಶುಕ್ರವಾರ ರಾತ್ರಿ ಕೂಡ ಪತ್ನಿ ಯನ್ನು ಥಳಿಸಿದ್ದಾರೆ. ಆದರೆ ಇಲ್ಲಿಯವರೆಗೆ ತಮ್ಮ ವಿರುದ್ಧದ ನಿಂದನೆ, ದೈಹಿಕ ಹಿಂಸೆ, ಮಾನಸಿಕ ಕಿರುಕುಳ ಸಹಿಸಿಕೊಂಡು ಬಂದಿದ್ದ ಶೋಭಾ ಮನೆಯಲ್ಲಿ ಕೈಗೆ ಸಿಕ್ಕ ವಸ್ತುವಿನಿಂದ ಪ್ರತಿ ಹಲ್ಲೆ ಮಾಡಿದ್ದಾರೆ. ತಲೆಗೆ ಬಿದ್ದ ಏಟಿಗೆ ನಿತ್ರಾಣರಾಗಿ ಬಿದ್ದ ಅವರನ್ನು ಶೋಭಾ ಅವರೇ ತಮ್ಮ ಮಗಳೊಂದಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ, ಆದರೆ ತೀವ್ರ ರಕ್ತಸ್ರಾವ್ರತೆಯಿಂದ ಅವರು ಕೊನೆಯುಸಿರೆಳೆದರು.
ತಾಯಿ ಶೋಭಾ ಅವರನ್ನು ತಂದೆಯ ಹಲ್ಲೆಯಿಂದ ರಕ್ಷಿಸಿಕೊಂಡ ಅವರ ಮಗಳನ್ನೂ ಕೊಲೆ ಪ್ರಕರಣದಲ್ಲಿ ಸೇರಿಸಿ ಬಂಧಿಸಲಾಗಿದೆ. ಶೋಭಾ ಧಾರವಾಡ ಜಿಲ್ಲಾ ಬಿಜೆಪಿ ಮಹಿಳಾ ಘಟಕವೊಂದರ ಅಧ್ಯಕ್ಷ ರಾಗಿದ್ದಾರೆ.